Wednesday, February 19, 2025
Homeಕೃಷಿ - ರೈತಲಿಂಗಸಗೂರು: ಸಿಡಿಲು ಬಡಿದು ಎತ್ತುಗಳ ಧಾರುಣ ಸಾವು!

ಲಿಂಗಸಗೂರು: ಸಿಡಿಲು ಬಡಿದು ಎತ್ತುಗಳ ಧಾರುಣ ಸಾವು!

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು: ಶನಿವಾರ ಸುರಿದ ಗುಡು-ಮಿಂಚು ಸಹಿತ ಮಳೆಗೆ, ತಾಲೂಕಿನ ಗುರುಗುಂಟಾ ಹತ್ತಿರದ ತೊಲಗೇರ ದೊಡ್ಡಿಯಲ್ಲಿ ಮೈನುದ್ದೀನ್‌ ಬಡೆಸಾಬ್‌ ಎಂಬುವರಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು ಧಾರುಣ ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ಕೋವಿಡ್‌ ಮಹಾಮಾರಿ ಮತ್ತು ಲಾಕ್‌ ಡೌನ್ ನಿಂದ ರೈತರು ಚೆತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಶನಿವಾರ ಸುರಿದ ಗುಡುಗು-ಮಿಂಚು ಸಹಿತ ಮಳೆಗೆ ಮೈನುದ್ದೀನ್‌ ಬಡೆಸಾಬ್‌ ಎಂಬುವವರಿಗೆ ಸೇರಿದ ಎರಡು ಎತ್ತುಗಳು ಸಾವನ್ನಪ್ಪಿವೆ, ಇನ್ನೇನು ಮಳೆಗಾಲ ಪ್ರಾರಂಭದ ಸಮಯ ಹೊಲದ ಕೆಲಸ-ಕಾರ್ಯಗಳು ಪ್ರಾರಂಭಿಸುವ ಹೊತ್ತಿನಲ್ಲೇ ಈ  ಘಟನೆ ಆಗಿದ್ದಕ್ಕೆ ಎತ್ತುಗಳನ್ನು ಕಳೆದುಕೊಂಡ ಬಡ ಕುಟುಂಬ ಹಣೆಗೆ ಕೈಹಚ್ಚಿ ಕುಂತಿದೆ, “ಮಳೆಗಾಲದ ಈ ಹೊತ್ತಿನಲ್ಲಿ ಹೊಲದ ಕೆಲಸಗಳು ಆರಂಭಿಸುವ ದಿನಗಳು, ಇದರಿಂದ ನಮಗೆ  ನೋವು-ನಷ್ಟವುಂಟಾಗಿದೆ, ಇನ್ನೂ ಮುಂದೆನು ಮಾಡುವುದು ಎಂಬ ಚಿಂತೆ, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕು” ಎಂದು ಈ ಮೂಲಕ ಮೈನುದ್ದಿನ್‌ ಕೇಳಿಕೊಂಡಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news