ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು:(ಮೇ 22,) ಸಂತೆಕೆಲ್ಲೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಂದ ಎ.ಎನ್.ಸಿ. ನೋಂದಾವಣಿ, ಗರ್ಭಿಣಿಯರ ಸಾಮಾನ್ಯ ಆರೋಗ್ಯ ವಿಚಾರಣೆಯೊಂದಿಗೆ ಪಟ್ಟಿ ಮಾಡಿ ಮತ್ತು ಕುಡಿಯುವ ನೀರು, ಬಳಸುವ ನೀರಿನ ಶುಚಿತ್ವ ಕುರಿತು ತಿಳಿಹೇಳಿ ಜಾಗೃತಿ ಮೂಡಿಸಲಾಯಿತು.

ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಸೇವನೆ ಹಾಗೂ ಕ್ರಮಬದ್ಧವಾದ ನಿಯಮಾನುಸಾರವಾದ ಆರೋಗ್ಯ ತಪಾಸಣೆಗೆ ಸೂಚಿಸಲಾಯಿತು.

ಕುಡಿಯುವ ನೀರು ಶುಚಿತ್ವವಾಗಿರಬೇಕು ಮತ್ತು ಬಳಸಲು ಶೇಖರಿಸಿಡುವ ನೀರನ್ನು ವಾರಕ್ಕೊಮ್ಮೇಯಾದರೂ ಬದಲಾಯಿಸಬೇಕು, ಸುತ್ತಲಿನ ವಾತವರಣ ಶುಚಿಯಾಗಿಡಬೇಕು ಎಂದು ಗ್ರಾಮಸ್ಥರಲ್ಲಿ ತಿಳಿಹೇಳಲಾಯಿತೆಂದು ವರದಿಯಾಗಿದೆ.
