ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಉಪ್ಪಾರ ನಂದಿಹಾಳ ಕೆರೆಯು ಸಂಪೂರ್ಣವಾಗಿ ತುಂಬುವ ಹಂತ ತಲುಪಿ, ಹಳ್ಳದ ಮೂಲಕ ಹೆಚ್ಚಿನ ನೀರು ಹರಿದು ಬಂದಿದ್ದರಿಂದ ಹಳ್ಳದ ಪಕ್ಕದ ಹಿರೇಲೆಕ್ಕಿಹಾಳ ಹಾಗೂ ಚಿಕ್ಕಲೆಕ್ಕಿಹಾಳ ಗ್ರಾಮಗಳ ಸುಮಾರು ಇಪ್ಪೈತ್ತೈದು ಜಮೀನುಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಬೆಳೆಹಾನಿಯಾದ ಬಗ್ಗೆ ವರದಿಯಾಗಿದೆ.

ಈ ಕುರಿತು ಹಾನಿಗೊಳಗಾದ ವಿಷಯವನ್ನು ಜಮೀನಿನ ಮಾಲಕರು ಹಾಗೂ ರೈತರು ಪ್ರಾಥಮಿಕವಾಗಿ ಗ್ರಾಮದ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಹಾಗಾಗಿ ಸದರಿ ಗ್ರಾಮಸ್ಥರು ಹಾಗೂ ರೈತರು, ಮಂದೆ ಮಳೆಯಿಂದಾಗಬಹುದಾದ ಹಾನಿಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಹಾನಿಯಾದ ಬೆಳೆಯ ಸಮೀಕ್ಷೆ ಮಾಡಿ, ಪಟ್ಟಿಯನ್ನು ತಯಾರಿಸಿ ಪರಿಹಾರ ಕ್ರಮಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಈ ಮೂಲಕ ಸಂಬಂಧಿಸಿದ ಗ್ರಾಮದ ಮತ್ತು ತಾಲೂಕ ಅಧಿಕಾರಿಗಳಿಗೆ ತಿಳಿಸಿರುತ್ತಾರೆ.