ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಬೈಲುಗುಡ್ಡ ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್‌ನಲ್ಲಿದ್ದ 9 ಜನರು ಇಂದು ಬಿಡುಗಡೆ ಹೊಂದಿದ್ದಾರೆ, ಇವರಲ್ಲಿ ಆರು ಜನ ಮಹಾರಾಷ್ಟ್ರ ಮತ್ತು ಇನ್ನೂಳಿದ ಮೂವರು ಆಂಧ್ರದಿಂದ ಮರಳಿದವರಾಗಿದ್ದು, ಇವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿದ್ದಿಲ್ಲ, ಮುನ್ನಚ್ಚರಿಗೊಸ್ಕರ ಕ್ವಾರಂಟೈನ್ ಮಾಡಲಾಗಿತ್ತು ಎಂದು ವರದಿಯಾಗಿದೆ.
ಕ್ವಾರಂಟೈನ್‌ನಿಂದ ಬಿಡುಗಡೆ ಹೊಂದಿದವರಿಗೆ ಮುಂಜಾಗ್ರತಾ ಕ್ರಮವಾಗಿ ಇನ್ನೂ 14 ದಿನಗಳವರೆಗೆ ಮನೆಯಲ್ಲಿಯೇ ಇರಬೇಕು, ಉಸಿರಾಟದ ತೊಂದರೆ-ಕೆಮ್ಮ-ಶೀತ ಆದರೆ ಅಥವಾ ಇನ್ನಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಅಥವಾ ಸೂಚಿತ ಸಹಾಯವಾಣಿಗೆ ತಿಳಿಸಿ, ಗಾಬರಿಯಾಗಬೇಡಿ, ಮುಂಜಾಗ್ರತೆಯಿರಲಿ ಮತ್ತು ನೀವು, ನಿಮ್ಮ ಕುಟುಂಬಸ್ಥರು ಮನೆಯಲ್ಲಿ ಹಾಗೂ ಸಾಮಾಜಿಕವಾಗಿ ಯಾವ ರೀತಿ ಇರಬೇಕೆಂದು ಸೂಚಿಸಿಲಾಯಿತು.

ಈ ಸಂದರ್ಭದಲ್ಲಿ ಡಾ.ನೇತ್ರಾವತಿ -ಆಯುಷ್ ವೈದ್ಯರು, ರಮೇಶ -ಗ್ರಾಮ ಲೆಕ್ಕಾಧಿಕಾರಿ,ಬೀಟ್ ಪೊಲೀಸ್ ಅಧಿಕಾರಿ, ಕಿರಿಯ ಆರೋಗ್ಯ ಸಿಬ್ಬಂದಿಗಳಾದ ಬಸವರಾಜ ಜೇರ್‌ಕಲ್ ಹಾಗೂ ಮಖ್ಬುಲ್ ಮತ್ತು ಪಂಚಾಯಿತಿಯ ಇತರೆ ಸಿಬ್ಬಂದಿ ಹಾಜರಿದ್ದರು.