ವರದಿಗಾರರು:ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಪಟ್ಟಣದ ಕೆಲ ಕೇರಳ ಮೂಲದ ಕಿರಾಣಿ ಅಂಗಡಿ, ಬೇಕರಿ ಮತ್ತು ಬಟ್ಟೆ ಅಂಗಡಿಗಳ ಕೆಲಸಗಾರರಲ್ಲಿ ಕೋವಿಡ್-19 ಸೋಂಕಿನ ಶಂಕೆಯು ವ್ಯಕ್ತವಾಗಿದ್ದು ಈ ಕುರಿತಂತೆ ಡಿವೈಎಸ್‌ಪಿ ಸಂಗಪ್ಪ ಎಸ್. ಹುಲ್ಲೂರು ಪಟ್ಟಣದ ಜನರಲ್ಲಿ “ಸಂಪೂರ್ಣವಾಗಿ ಮೇ ತಿಂಗಳಿನಲ್ಲಿ ಸದರಿ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಮಾಡಿದ್ದರೆ ಅಂತಹವರು ಮುಂಜಾಗ್ರತೆಗೋಸ್ಕರ, ಪಟ್ಟಣ ಹಾಗೂ ಉಳಿದ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಸ್ವತಃ ವೈದ್ಯಕೀಯ ಪರೀಕ್ಷೆಗೆ ಒಳಪಡಿರಿ ಅಲ್ಲದೇ ಸ್ಯಾನೀಟೈಸರ್-ಮಾಸ್ಕ್ ಬಳಸಿ, ಸಿಗರೇಟು-ತಂಬಾಕು ಸಂಪೂರ್ಣವಾಗಿ ನಿಷೇಧಿಸಿದೆ, ಸಿಗರೇಟು-ತಂಬಾಕು ಮಾರಾಟ-ಸೇವನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಥಳಿಯರಲ್ಲಿ ಸೂಚಿಸಿದ್ದಾರೆ.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ “ಬಾಲನ್ ಕಿರಾಣಿಸ್ಟೋರ್- ಫ್ಯಾಷನ್ ವಿಲ್ಲೇಜ್- ಅತಿಥಿ ಬೇಕರಿ- ಎಸ್ಎಲ್‌ವಿ ಬೇಕರಿಯ ಕರ್ತ್ಯವ್ಯ ನಿರ್ವಹಿಸುವವರಲ್ಲಿ ಒಂದಿಷ್ಟು ಜನರು ಕೋವಿಡ್-19 ಶಂಕೆಗೆ ಒಳಪಟ್ಟಿದ್ದಾರೆ, ಸದರಿಯವರಲ್ಲಿ, ಸದರಿ ಸ್ಥಳಗಳಲ್ಲಿ ಮೇ ತಿಂಗಳಿನಲ್ಲಿ ವ್ಯಾಪಾರ ವಹಿವಾಟು, ಸಾಮಾನು ಖರೀದಿ, ನಗದು ವ್ಯವಹಾರ ಮಾಡಿದವರು ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಒಳಪಡುವುದು ಸೂಕ್ತ” ಎಂದು ಡಿವೈಎಸ್‌ಪಿ ಸಂಗಪ್ಪ ಎಸ್. ಹುಲ್ಲೂರು ಸೇರಿದಂತೆ ಸಿಪಿಐ ಯಶವಂತ ಬಿಸ್ನಳ್ಳಿ ಹಾಗೂ ಪ್ರಕಾಶ ರಡ್ಡಿ ಡಂಬಳ್ ಸೇರಿದಂತೆ ಸ್ಥಳಿಯ ಠಾಣೆಯ ಪೊಲೀಸ್ ಸಿಬ್ಬಂದಿ, ಸಮಸ್ತ ಪಟ್ಟಣದ ಜನರ ಆರೋಗ್ಯ ದೃಷ್ಟಿಕೋನದಿಂದ ಮನವಿಯೊಂದಿಗೆ ಸೂಚಿಸಿದ್ದಾರೆ.