ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಆಶಾಕಾರ್ಯಕರ್ತೆಯರ ಹೋರಾಟದ 16ನೇ ದಿನ ಹಾಗೂ ಜುಲೈ 10, ರಿಂದ ಆರೋಗ್ಯ ಸೇವೆ ಸ್ಥಗಿತದ ಹೋರಾಟ ಮುಂದುವರೆದು, ಇಂದು (ಪೋಸ್ಟ್ ಕಾರ್ಡ್) ಪತ್ರ ಚಳುವಳಿ ಮೂಲಕ ತಮ್ಮ ನ್ಯಾಯಯುತವಾದ ಬೇಡಿಕೆಗಳ ಸ್ಪಂದನೆ ಹಾಗೂ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದರು.

ಆಶಾಕಾರ್ಯಕರ್ತೆಯರಿಂದ ಇಂದು ನಡೆದ ‘ಪೋಸ್ಟ್ ಕಾರ್ಡ್- ಪತ್ರ ಚಳುವಳಿ ರಾಜ್ಯದ ಹಲವೆಡೆ ನಡೆದಂತೆ, ಲಿಂಗಸಗೂರು ತಾಲೂಕಿನಲ್ಲಿ ಕೂಡ ಮಾನ್ಯ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದ ಆಶಾಕಾರ್ಯಕರ್ತೆಯರು, ಮಾಸಿಕ ರೂ.12,000 ಗೌರವಧನ ನೀಡಬೇಕು ಮತ್ತು ಕೊರೋನಾ ಸೋಂಕಿನಿಂದ ರಕ್ಷಣೆ ಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಇತ್ಯಾದಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ 16 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಪರಿಹರಿಸದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಆಶಾಕಾರ್ಯಕರ್ತೆಯರು ತಮ್ಮ ಪಿ.ಎಚ್. ಸಿ ಮುಂದೆ ಪ್ರತಿಭಟನೆ-ಹೋರಾಟ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರ್ಯಕರ್ತೆಯರು ಗೆಲ್ಲುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

“ಜೀವನ ಯೋಗ್ಯ ವೇತನ/ಗೌರವಧನ ನೀಡದೇ ಕೊರೋನಾ ವಿರುದ್ಧದ ಫ್ರಂಟ್ ಲೈನ್ ವಾರಿಯರ್ಸ್ ಎಂದು ಹೊಗಳಿ, ಹೂ ಮಳೆ ಸುರಿಸಿ, ಶಾಲು ಹಾಕಿ ಸನ್ಮಾನಿಸಿದರೆ, ಕೆಲವರನ್ನು ದೇಶಕ್ಕೆ ರಾಜ್ಯಕ್ಕೆ ಅತ್ಯುತ್ತಮ ಕಾರ್ಯಕರ್ತೆ ಎಂದು ನಾಮಕರಣ ಮಾಡಿ ಪುಕ್ಕಟೆಯಾಗಿ ಹಗಲು ರಾತ್ರಿ ಗಾಣದೆತ್ತಿನಂತೆ ಸರ್ಕಾರ ದುಡಿಸಿಕೊಳ್ಳುತ್ತಿದೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, “ಕಳೆದ 16 ದಿನಗಳ ಹಿಂದೆ ಸಿಡಿದೆದ್ದಿರುವ ರಾಜ್ಯದ 42,000 ಆಶಾಕಾರ್ಯಕರ್ತೆಯರು ಅತ್ಯಂತ ಸಮರಶೀಲವಾಗಿಯೂ ಮತ್ತು ಶಿಸ್ತಿನಿಂದಲೂ ಕಳೆದ 16 ದಿನಗಳಿದಂಲೂ ವಿವಿಧ ಹಂತದ ಹೋರಾಟ ಮಾಡುತ್ತಿದ್ದೆವೆ, ಈ ಹೋರಾಟ ರಾಜ್ಯದ ಜನತೆಯ ಮನ ಗೆದ್ದಿದೆ, 16 ದಿನಗಳ ಸುಧೀರ್ಘ ಹೋರಾಟ ನಡೆಸಿದರೂ ಸಮಸ್ಯೆ ಗಳ ಕುರಿತು ಮಾತುಕತೆಯನ್ನು ಸರ್ಕಾರ ಕೈಗೊಂಡಿಲ್ಲ” ಎಂದು ಆಶಾಕಾರ್ಯಕರ್ತೆಯರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ,

ಈ ನ್ಯಾಯಯುತ ಹೋರಾಟಕ್ಕೆ ಈ ಹಿಂದೆ ಸಚಿವರು, ಶಾಸಕರು ಮತ್ತು ಸಂಸದರು ಬೆಂಬಲಿಸಿ ಪತ್ರ ನೀಡಿದ್ದಾಗಿಯೂ, ಇಂದು ಕೂಡಾ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಲಿಂಗಸಗೂರುಪಟ್ಟಣ ಸೇರಿದಂತೆ ಹೂನೂರು, ಮಾಕಾಪುರ,ಮಸ್ಕಿ,ಕನಸಾವಿ, ಕೋಮಲಾಪುರ, ರೋಡಲಬಂಡಾ ಗ್ರಾಮಗಳ ಅಂಚೆ ಕಛೇರಿಗಳಲ್ಲಿ, ಸರ್ಕಾರವನ್ನು ಪತ್ರ ಚಳುವಳಿ ಮೂಲಕ ಒತ್ತಾಯಿಸಿದರು.