Saturday, March 22, 2025
Homeಸುದ್ದಿಲಿಂಗಸಗೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಖಂಡನೆ - ಪ್ರತಿಭಟನೆ.

ಲಿಂಗಸಗೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಖಂಡನೆ – ಪ್ರತಿಭಟನೆ.

ಲಿಂಗಸಗೂರು: “ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಹಾಗೂ ದೆಹಲಿ ಗಡಿಭಾಗದಲ್ಲಿನ ಹೋರಾಟವನ್ನು ಕೇಂದ್ರ ಸರ್ಕಾರ ನಿಷ್ಕಾಳಜಿ ಮಾಡುತ್ತಿದೆ ”  ಎಂದು  ಪಟ್ಟಣದ ಬಸ್‌ ನಿಲ್ದಾಣದ  ಮುಂದಿನ ಮುಖ್ಯ ರಸ್ತೆಯಲ್ಲಿ ಕೆಲ ಪ್ರಗತಿಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದವು.

ʻ ದೆಹಲಿ ರೈತರ ಹೋರಾಟಕ್ಕೆ ನಮ್ಮ ಬೆಂಬಲ ʼ  ʻದೆಹಲಿ ಗಡಿಭಾಗದಲ್ಲಿನ ಹೋರಾಟವನ್ನು ಕೇಂದ್ರ ಸರ್ಕಾರ ನಿಷ್ಕಾಳಜಿ ಮಾಡುತ್ತಿದೆ ʼ  ಎಂದು ಪ್ರತಿಭಟನೆ ನಿರತ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ  ಘೋಷಣೆಗಳನ್ನು ಕೂಗುತ್ತಾ ಕೆಲ ಕಾಲ ರಸ್ತೆ ಬಂದ್‌ ಮಾಡುವುದರ ಮೂಲಕ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ AIDYO ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಉದ್ಬಾಳ್‌, SFI ಜಿಲ್ಲಾ ಅಧ್ಯಕ್ಷರಾದ ರಮೇಶ ವೀರಾಪುರ, KGSR ನ ಬಸವಲಿಂಗಪ್ಪ, ರೈತ ಸಂಘ (ಹಸಿರು ಸೇನೆ) ತಾಲೂಕ ಅಧ್ಯಕ್ಷರಾದ ಶಿವಪುತ್ರಪ್ಪಗೌಡ, ಜಿಲ್ಲಾ ಉಪಾಧ್ಯಕ್ಷರಾದ ಬಸನಗೌಡ ಹಿರೇಹೆಸರೂರು, ಸಿಐಚಿಯು ನ ಹನೀಫ್‌, AIDYO  ನ ಪದಾಧಿಕಾಗಳಾದ ತಿರುಪತಿ ಗೋನವಾರ, ಬಾಬುಜಾನಿ, ಪ್ರಾಂತ ರೈತ ಸಂಘದ ಸದ್ದಾಂ ಮೊದಲಾದವರು ಭಾಗವಹಿಸಿದ್ದರು.

ಪ್ರತಿಭಟನೆ ನಿಮಿತ್ತ ಸೂಕ್ತ ಪೊಲೀಸ್  ನಿಯೋಜನೆ ಮಾಡಲಾಗಿತ್ತು, ಅಲ್ಲದೇ  ಪ್ರತಿಭಟನೆಯಿಂದ ಕೆಲ ಸಮಯ ವಾಹನ ಸವಾರರು ಪರದಾಡುವಂತಾಯಿತು.

ವರದಿಗಾರರು: ಸುರೇಶ ಹಿರೇಮಠ, ಮೋ: 95918 68388(Valid upto 29Feb, 2021)

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news