ಸಂಕ್ಷಿಪ್ತ ಸುದ್ದಿ:
ಲಿಂಗಸಗೂರು: (ಮಸ್ಕಿ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ವತಿಯಿಂದ, ಲಿಂಗಸಗೂರು ತಾಲ್ಲೂಕು ಸಿ ಎಚ್ ಸಿ ಮುದಗಲ್, ಪಿ ಎಚ್ ಸಿ ಮೆದಿಕೀನಾಳ ಹಾಗೂ ಸರಕಾರಿ ಪ್ರೌಢ ಶಾಲೆ ಕನ್ನಾಳ ಸಹಭಾಗಿತ್ವದಲ್ಲಿ “ ರಾಷ್ಟ್ರೀಯ ಕಿಶೋರ್ ಸ್ವಾಸ್ಥ ಕಾರ್ಯಕ್ರಮ” ವು ಬುಧವಾರ ಕನ್ನಾಳ ಗ್ರಾಮದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಪ್ರೌಢ ವಯಸ್ಕ ಮಕ್ಕಳ –ವಿಧ್ಯಾರ್ಥಿಗಳ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಅಲ್ಲದೇ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಯಂಕಪ್ಪ ವಾಯ್, ವೈದ್ಯರುಗಳಾದ ಡಾ. ಶಂಕರಾಚಾರ್ಯ, ಶ್ರೀಮತಿ ಡಾ. ಸೌಮ್ಯ , ಡಾ. ಕಿರಣ, ಕಾರ್ಯಕ್ರಮದ ಸಂಯೋಜಕರಾಗಿ-ಆಪ್ತ ಸಮಾಲೋಚಕರಾದ ಕು.ಗೌರಮ್ಮ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸ್ಥಳಿಯ ಪ್ರೌಢಶಾಲೆಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು: ಸುರೇಶ ಹಿರೇಮಠ, ಮೋ: 95918 68388 (Upto 29 Feb,2021)