ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸ್ಥಳಿಯ ಎಕ್ಸ್ ಪರ್ಟ್ ಶಾಲೆಯ ವಿರುದ್ಧದ ದೂರುಗಳ ವಿಚಾರಣೆ ಹಂತದಲ್ಲಿರುವುದರಿಂದ ಸನ್ 2020-21 ರ ಪ್ರವೇಶಾತಿ-ದಾಖಲಾತಿ ಪ್ರಕ್ರಿಯೆಗಳನ್ನು ತಡೆಯಲು ಕರುನಾಡ ಸೇನೆ ಲಿಂಗಸಗೂರು ಘಟಕದ ತಾಲೂಕ ಅಧ್ಯಕ್ಷರಾದ ಶಿವನಗೌಡ ಕೆ. ಇವರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯಲ್ಲಿ, ಈ ಮೊದಲಿನ ಜನೇವರಿ, 2020 ರ ಜಾಲತಾಣದ ವರದಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಿಂಗಸಗೂರು ಇವರ ವರದಿಯನ್ನು ಉಲ್ಲೇಖಿಸಿ, ಉಲ್ಲೇಖದಂತೆ ಶ್ರೀ ಬಸವ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಎಕ್ಸ್ ಪರ್ಟ್ ಶಾಲೆಯ ಕುರಿತಾಗಿ ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರಿಗೆ ಸದರಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದಿರುವುದಾಗಿ ಮತ್ತು ಲೋಪದೋಷಗಳ ಬಗೆಗಿನ ತನಿಖಾ ವರದಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದು ಇರುವುದನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುತ್ತಾ, ಶಾಲೆಯ ಮೇಲೆ ಇರುವ ದೂರುಗಳು ವಿಚಾರಣೆಯ ಹಂತದಲ್ಲಿರುವುದರಿಂದ, ಮುಂದೆ ಸದರಿ ಶಾಲೆಯ ಅನುಮತಿ ರದ್ಧತಿಯಾದರೆ ಪ್ರವೇಶಾತಿ ಪಡೆದ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತದೆ ಹಾಗೂ ಪೋಷಕರು ಆತಂಕ್ಕೀಡಾಗುವ ಸಂಭವವಿರುತ್ತದೆ ಎಂದು ತಿಳಿಸುತ್ತಾ, ವಿಚಾರಣೆ ಮುಗಿಯುವವರೆಗೂ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆಗಳನ್ನು ತಡೆಹಿಡಿಯಲು ಕರುನಾಡ ಸೇನೆಯ ತಾಲೂಕ ಅಧ್ಯಕ್ಷರಾದ ಶಿವನಗೌಡ ಕೆ. ಅವರು, ತಾಲೂಕ ಉಪಾಧ್ಯಕ್ಷರಾದ ಹುಲಗಪ್ಪ ಆನೆಹೊಸುರು, ಕಾರ್ಯದರ್ಶಿ ಮಂಜುನಾಥ ರಾಠೋಡ ಸಹಿಯನ್ನೊಳಗೊಂಡ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದರು.