ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು (ಮೇ 23): ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಸಭೆ ಜರುಗಿತು.

ಮಾಸಿಕ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಗ್ರಾಮದ ಜನರ ಕಾಳಜಿಯುತ ಪ್ರಾಥಮಿಕ ಅಂಕಿ ಆಂಶಗಳು ಮುಖ್ಯವಾಗಿರುತ್ತವೆ, ಈ ನಿಟ್ಟಿನಲ್ಲಿ ಗ್ರಾಮಸ್ಥರ ಯಾವ ಸಾಮಾನ್ಯ ಆರೋಗ್ಯ ವಿಚಾರಿಸಬೇಕು, ಗರ್ಭಿಣಿಯರಿಗೆ ಮತ್ತು ಬೆಳೆಯುವ ಮಕ್ಕಳಿಗೆ ಪೌಸ್ಠಿಕ ಆಹಾರದ ಕುರಿತು ತಿಳಿಹೇಳಬೇಕು, ಅವರ ಸಾಮಾನ್ಯ ಆರೋಗ್ಯ ಯಾವ ರೀತಿ ಕಾಪಾಡಿಕೊಳ್ಳಲು ಸಲಹೆ ನೀಡಬೇಕು ಅಲ್ಲದೇ ಮುಖ್ಯವಾಗಿ ಮಾಸ್ಕ ಧರಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಬೇಕು, ಕುಡಿಯುವ ಹಾಗೂ ಬಳಸುವ ನೀರಿನ ಸ್ವಚ್ಛತೆ-ಬಳಕೆ ಕುರಿತು ಗ್ರಾಮಸ್ಥರಲ್ಲಿ ಮನವರಿಕೆ ಮಾಡಬೇಕೆಂಬ ಸೂಚನೆ ಸಲಹೆಗಳನ್ನು ಪಾಲ್ಗೋಂಡಿದ್ದ ಆಶಾ ಕಾರ್ಯಕರ್ತರಿಗೆ ಮತ್ತು ಜಿ.ಎನ್. ಎಮ್. ಸಹೋದರಿಯರಿಗೆ ತಿಳಿಸಲಾಯಿತು.

ಮಾಸಿಕ ಸಭೆಯಲ್ಲಿ ಪ್ರಯೋಗಾಲಯ ತಂತ್ರಜ್ಙ ಶ್ರೀ ಜು಼ಬೇರ್, ಜಿ ಎನ್ ಎಮ್ ಸಹೋದರಿಯರಾದ ಹುಲಿಗೆಮ್ಮ, ಮಲ್ಲಮ್ಮ, ಗಿರೀಜಾ, ರಾಧ ಮತ್ತು ಆಶಾ ಕಾರ್ಯಕರ್ತೆಯರ ಸ್ಪೇ಼ಷಲ್ ಟ್ರೀಟರ್ ಶ್ರೀಮತಿ ಶೋಭಾ ಮೇಟಿ ಸೇರಿದಂತೆ ಗ್ರಾಮ ವಲಯದ ಆಶಾ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು.