ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಮನವಿಯೊಂದಿಗೆ ಆರಂಭವಾದ ಆಶಾ ಕಾರ್ಯಕರ್ತೆಯರ ಹೋರಾಟ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ, ಇಲ್ಲಿಯವರೆಗೆ ಸರ್ಕಾರವು ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿದ ಹಿನ್ನಲೆಯಲ್ಲಿ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾನವ ಸರಪಳಿ ಮತ್ತು ಪ್ರತಿಭಟನೆಗೆ ಕರೆ ನೀಡಿರುವ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC), ಲಿಂಗಸಗೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ “ತಿಂಗಳ ಗೌರವಧನವನ್ನು 12,000 ಕ್ಕೆ ನಿಗದಿ ಮಾಡಿ, ಕೋವಿಡ್-19 ಕಾರ್ಯಗಳಿಗಾಗಿ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿ” ಎಂದು ಒತ್ತಾಯಿಸಿ ಲಿಂಗಸಗೂರು ಪಟ್ಟಣದ ಬಸ್ ನಿಲ್ದಾಣದ ಸರ್ಕಲ್ ಹತ್ತಿರ ಪ್ರತಿಭಟನೆ ಮಾಡಿದರು.

ಈ ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಲವಿನಾ, AIDYO ನ ತಿರುಪತಿ ಗೋನವಾರ, ಆಶಾ ಕಾರ್ಯಕರ್ತೆಯರಾದ ವನಿತಾ, ಸುವರ್ಣ, ಶೋಭಾ, ಲಕ್ಷ್ಮೀ, ಗಂಗಮ್ಮ, ಶೀಲವಂತಿ, ನಾಗಮ್ಮ, ವಿಜಯಲಕ್ಷ್ಮಿ ಮುಂತಾದವರು ಭಾಗವಹಿಸಿದ್ದರು.