ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಸಂಘ (ರಿ), ಲಿಂಗಸಗೂರು ತಾಲೂಕ ಸಮಿತಿ ವತಿಯಿಂದ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ತಿಂಗಳ ಗೌರವಧನವನ್ನು 12,000 ಕ್ಕೆ ನಿಗದಿ ಮಾಡಿ, ಕೋವಿಡ್-19 ಕಾರ್ಯಗಳಿಗಾಗಿ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿ ಎಂದು ಒತ್ತಾಯಿಸಿ ಲಿಂಗಸಗೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿಯನ್ನು ಕೈಗೊಳ್ಳುವುದರ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷ ಶ್ರೀ ಶರಣಪ್ಪ ಉದ್ಬಾಳ ಅವರು ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸುತ್ತಾ, ಅವರ ಅವೀರತವಾದ ಸೇವೆಯನ್ನು ಪುಷ್ಠಿಕರಿಸುತ್ತಾ, ಕಳೆದ ಜನೆವರಿ ತಿಂಗಳಿನಿಂದ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿರುವುದಾಗಿ ತಿಳಿಸಿ, ವೇತನದ ಹಿನ್ನಲೆ ಹಾಗೂ ಸರ್ಕಾರದ ವಾಗ್ಧಾನದಂತೆ ವೇತನ-ಸಹಾಯಧನ ಆದೇಶದ ಪಾಲನೆಗಾಗಿ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷರು ಹಾಗೂ ತಾಲೂಕ ಕಾರ್ಯದರ್ಶಿ ಸೇರಿದಂತೆ ತಾಲೂಕಿನ ಅಧಿಕ ಸಂಖ್ಯೆಯ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.