ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (AIDYO) ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ, “ವಲಸಿ ಕಾರ್ಮಿಕರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂಪಾಯಿ ಮೂರು ನೂರು ದಿನಗೂಲಿಯಂತೆ, ಎರಡು ನೂರು ದಿನಗಳ ಕಾಲ ಕೆಲಸ ನೀಡಿ. ಖಾಸಗಿ ವಲಯಗಳಲ್ಲಿ ಸಂಬಳ ಕಡಿತ ನಿಲ್ಲಿಸಿ, ಉದ್ಯೋಗ ಕಡಿತ ಮತ್ತು ರಿಟ್ರೆಂಚ್ ಮೆಂಟ್ ನಿಲ್ಲಿಸಿ, ನಿರುದ್ಯೋಗಿಗಳಿಗೆ ಐದು ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡಿ, ಮದ್ಯಪಾನ ಮತ್ತು ಆಶ್ಲೀಲತೆಯನ್ನು ನಿಷೇದಿಸಿ. ಅದೇ ರೀತಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಕಟ್ಟಡ ಕಾರ್ಮಿಕರಿಗೆ ಘೋಷಣೆ ಮಾಡಿದ ಐದು ಸಾವಿರ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಿ” ಎಂಬ ವಿಷಯ-ಬೇಡಿಕೆಗಳ ಮನವಿ ಪತ್ರವನ್ನು ಲಿಂಗಸೂಗುರ AIDYO ತಾಲೂಕು ಘಟಕದಿಂದ ಸಹಾಯಕ ಆಯುಕ್ತರ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ AIDYO ಜಿಲ್ಲಾ ಉಪಾಧ್ಯಕ್ಷ ತಿರುಪತಿ ಗೋನವಾರ, ಜಿಲ್ಲಾ ಕೌನ್ಸಿಲ್ ಮೆಂಬರ್ ಬಾಲಜಿ ಸಿಂಗ್ ಚನ್ನಪ್ಪ ತೆಗ್ಗಿನಮನಿ, ಇತರೆ ಸದಸ್ಯರು ಮತ್ತು ಕಟ್ಟಡ ಕಾರ್ಮಿಕರಾದ ಗೋಪಿ, ಹನುಮಂತು, ಗುರುರಾಜ, ಅಮರೇಶ ಗೋನವಾರ, ಶ್ರೀನಿವಾಸ, ನಿಂಗಪ್ಪ, ರಾಮಣ್ಣ, ಮುಂತಾದವರು ಭಾಗವಹಿಸಿದ್ದರು.