ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು(ಮಸ್ಕಿ): ಇತ್ತಿಚಿಗೆ ತಾಲೂಕ ಪಂಚಾಯಿತಿ ಕಛೇರಿ ಲಿಂಗಸಗೂರುನಲ್ಲಿ “ಜಲ ಜೀವನ ಮಿಷನ್ “ ಕುರಿತು ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಾರದು, ಮುಂಜಾಗ್ರತೆ ವಹಿಸಿ ಕೊಳ್ಳಬೇಕು, ಗ್ರಾಮದಲ್ಲಿ ನೀರಿನ ಕೊರತೆಗೆ ಪಿ.ಡಿ.ಒ. ಗಳೆ ನೇರ ಹೊಣೆ ಎಂದು ಸೂಚಿಸಲಾಗಿತ್ತು, ಹಾಗಾಗಿ ತಾಲೂಕ ಪಂಚಾಯಿತಿ ಇ.ಓ. ಪಂಪಾಪತಿ ಹಿರೇಮಠ ಸೂಚನೆ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ವತಿಯಿಂದ ಇತ್ತಿಚಿಗೆ ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಿಗುಡ್ಡ ಗ್ರಾಮದಲ್ಲಿ “ಜಲ ಜೀವನ ಮಿಷನ್” ಕುರಿತು ಗ್ರಾಮ ಸಭೆ ನಡೆಯಿತು.

ಗ್ರಾಮ ಸಭೆಯಲ್ಲಿ ಕುಪ್ಪಿಗುಡ್ಡ ಗ್ರಾಮದಲ್ಲಿ ನೀರಿನ ಸಮಸ್ಯೆ ಮೊದಲಿನಿಂದಲೂ ಇದೆ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ನೀರಿನ ಕೊರತೆಯನ್ನು ನೀಗಿಸಿ ಎಂದು ಗ್ರಾಮಸ್ತರು ಪಿ.ಡಿ.ಓ. ರವರಿಗೆ ಆಗ್ರಹಿಸಿದರು.
“ಜಲ ಜೀವನ ಮಿಷನ್” ಅಡಿಯಲ್ಲಿ ನೀರಿನ ಕೊರತೆ ಬರುವ ನಿವಾರಣಾ ಕ್ರಮಗಳನ್ನು ಗ್ರಾಮಸ್ಥರಲ್ಲಿ ಮನವರಿಕೆ ಮಾಡಿ ತಿಳಿ ಹೇಳಿ ಸೂಕ್ತ ಕ್ರಮದೊಂದಿಗೆ ಹಾಗೂ ತಮ್ಮೆಲ್ಲ ಗ್ರಾಮದ ಜನರ ಸಹಕಾರದಿಂದ ಈ ಕುಡಿಯುವ ನೀರಿನ ಸಮಸ್ಯೆಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಪಿ.ಡಿ.ಓ. ಶ್ರೀಮತಿ ಶೋಭಾರಾಣಿ ತಿಳಿಸಿದರು.

ಗ್ರಾಮಸಭೆಯಲ್ಲಿ ಕುಪ್ಪಿಗುಡ್ಡ ಗ್ರಾಮದ ಅನೇಕ ಮಹಿಳೆಯರು-ಗ್ರಾಮಸ್ಥರು ಪಾಲ್ಗೊಂಡಿದ್ದರು, ಸಭೆಯಲ್ಲಿ ಶ್ರೀಮತಿ ಶೋಭಾರಾಣಿ-ಪಿ.ಡಿ.ಓ. , ಕಾಸಿಂ ಪೀರಾ-ಬಿಲ್ ಕಲೇಕ್ಟರ್, ಗ್ರಾಮದ ವಾಟರ್ ಮನ್ ಸೇರಿದಂತೆ ಇತರರು ಹಾಜರಿದ್ದರು.