ರಾಯಚೂರು: ತುರ್ತು ಸೇವೆಗಳ ಸಂದರ್ಭದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನೂತನವಾಗಿ ಜಾರಿಗೊಳಿಸಿರುವ ಏಮರ್ಜೇನ್ಸಿ ರೆಸ್ಪಾನ್ಸ್ ಸಪ್ಪೋರ್ಟಿಂಗ್ ಸಿಸ್ಟಂ (ERSS) ಅನ್ನು ಜಿಲ್ಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಕಾಶ್ ನಿಕಮ್ ಅವರು ಡಿ ಏ ಆರ್ ಪೊಲೀಸ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು “ರಾಯಚೂರು ಜಿಲ್ಲೆಗೆ ಹೊಸದಾಗಿ ಹಂಚಿಕೆಯಾಗಿರುವ 13 ವಾಹನಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ, ಇದು ಪೊಲೀಸ್ ಕಂಟ್ರೋಲ್ ರೂಂ ಕರೆಯಾದ 112 ಗೆ ಸಂತ್ರಸ್ತರು ಕರೆ ಮಾಡಿದ್ದಲ್ಲಿ ಈ ಕರೆ ಬೆಂಗಳೂರಿನ ಮುಖ್ಯ ಕಂಟ್ರೋಲ್ ರೂಂ ಗೆ ಹೋಗುತ್ತದೆ, ಅಲ್ಲಿಂದ ಸಂಬಂಧಿಸಿದ ಜಿಲ್ಲೆಗೆ ಕಾಲ್ ಡೈವರ್ಟ್ ಮಾಡಲಾಗುತ್ತದೆ, ಹತ್ತಿರದ ಜಿ ಪಿ ಎಸ್ ಲೊಕೇಷನ್ ಮೂಲಕ ಕರೆ ಬಂದ ಸ್ಥಳಕ್ಕೆ ಸಮೀಪದ ವಾಹನ ಕಳುಹಿಸಲು ನೆರವಾಗುತ್ತದೆ, ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುತ್ತದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸೇವೆಯ ಚಾಲನೆಯಿಂದ ರಾಜ್ಯದ ಇತರೆ ಪ್ರಮುಖ ಜಿಲ್ಲಾ ಪೊಲೀಸ್ ಇಲಾಖೆಯಂತೆ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯು ತ್ವರಿತ ಗತಿಯ ವ್ಯವಸ್ಥೆಗೆ, ಶ್ಲಾಘನೆಯೊಂದಿಗೆ ಗುರುತಿಸಿಕೊಂಡಂತ್ತಾಗಿದೆ.
