ಸಂಕ್ಷಿಪ್ತ ಸುದ್ದಿ- ವಿಡಿಯೋ :
ರಾಯಚೂರು: ಅಪಾರ ಮಳೆ – ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ, ಬೆಳೆ ಹಾನಿಗೀಡಾದ ರಾಯಚೂರು ಜಿಲ್ಲೆಯ ಕರೆಕಲ್ ಗ್ರಾಮ ಮತ್ತಿತರ ಪ್ರದೇಶಗಳಿಗೆ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಎಸ್. ಸವದಿ ಅವರು ಭೇಟಿನೀಡಿ, ಪ್ರವಾಹ ಸಂತ್ರಸ್ತರ ಅಹವಾಲುಗಳನ್ನು ಪರಿಶಿಲಿಸಿ ಮುಂದಿನ ಸೂಕ್ತ ಪರಿಹಾರ ಕಾರ್ಯಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೇ ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದ ಮಾನ್ಯ ಸವದಿ ಅವರು, ವಿವಿಧ ರೈತರ ಮತ್ತು ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಮನವಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ರಾಜಾ ಅಮರೇಶ್ವರ ನಾಯಕ್, ಶಾಸಕರಾದ ಡಾ. ಶಿವರಾಜ್ ಪಾಟೀಲ್ ಸೇರಿದಂತೆ ಇನ್ನಿತರ ಗಣ್ಯರು, ಜಿಲ್ಲಾ ಹಿರಿಯ ಅಧಿಕಾರಿ ವರ್ಗದವರು ಹಾಗೂ ಇಲಾಖಾ ಸಂಬಂಧಿತ ಅಧಿಕಾರಿಗಳು ಇದ್ದರು.
