ರಾಜ್ಯ ವಿಧಾನಸಭೆಗೆ ಮತದಾನ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಶೇಕಡ 72.67 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅತಿ ಹೆಚ್ಚಿನ ಶೇಕಡಾವಾರು ಮತದಾನ ಚಿಕ್ಕಬಳ್ಳಾಪುರ 85.83 ಆಗಿದ್ದರೆ, ಕಡಿಮೆ ಶೇಕಡಾವಾರು ಬೆಂಗಳೂರು ನಗರ 56.98 ಆಗಿದೆ.

ಉಳಿದಂತೆ ರಾಮನಗರ ಜಿಲ್ಲೆಯಲ್ಲಿ ಶೇಕಡ 84.98, ಉಡುಪಿ -78.46, ಬೆಂಗಳೂರು ಗ್ರಾಮಾಂತರ 83.76, ಬಿಬಿಎಂಪಿ (ಉತ್ತರ) 52.88, ಬಿಬಿಎಂಪಿ (ಕೇಂದ್ರ) 55.39, ಬಿಬಿಎಂಪಿ (ದಕ್ಷಿಣ) 52.80, ವಿಜಯನಗರ-77.62, ತುಮಕೂರು 83.46, ಮಂಡ್ಯ – 84.36, ಶಿವಮೊಗ್ಗ 77.22, ಚಾಮರಾಜನಗರ 80.81, ಕೋಲಾರ 81.22, ಕೊಡಗು – 74.74, ಚಿತ್ರದುರ್ಗ 80.37, ಬಳ್ಳಾರಿ- 76.13, ಹಾಸನ 81.59, ಹಾವೇರಿ 81.17, ಕೊಪ್ಪಳ 77.25, ಬಾಗಲಕೋಟೆ 74.63, ಚಿಕ್ಕಮಗಳೂರು-77.89, ಗದಗ 75.21, ದಾವಣಗೆರೆ 77.47, ದಕ್ಷಿಣ ಕನ್ನಡ 76.15, ಬೆಳಗಾವಿ 76.33, ಮೈಸೂರು – 75.04, ಉತ್ತರ ಕನ್ನಡ – 76.72 ಯಾದಗಿರಿ – 66.66 ಧಾರವಾಡ – 71.02 ರಾಯಚೂರು – 69.79 ವಿಜಯಪುರ – 70.78, ಬೀದರ್ ಜಿಲ್ಲೆಯಲ್ಲಿ ಶೇಕಡ 71.66 ಮತ್ತು ಕಲಬುರಗಿ ಜಿಲ್ಲೆಯಲ್ಲಿ ಶೇಕಡ 65.22ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶಗಳು ಮಾಹಿತಿ ನೀಡಿವೆ.