ಶಿಕ್ಷಣ:
* 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂಪಾಯಿ ಅನುದಾನ.
* ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆ ಆರಂಭ.
* ವಿವೇಕ ಯೋಜನೆಯಡಿ 7,601 ಶಾಲಾ ಮತ್ತು ಕಾಲೇಜುಗಳ ಕೊಠಡಿ ನಿರ್ಮಾಣ.
* ಮೂಲಭೂತ ಸೌಕರ್ಯ ಮತ್ತು ಸೂಕ್ತ ಕಲಿಕಾ ಸಂಪನ್ಮೂಲ ಒದಗಿಸಲು ಕೇಂದ್ರದ ‘ಪಿಎಂ ಶ್ರೀ’ ಯೋಜನೆ 100 ಕೋಟಿ ವೆಚ್ಚದಲ್ಲಿ ಅನುಷ್ಠಾನ.
* ಶಾಲಾ- ಕಾಲೇಜುಗಳಲ್ಲಿ ಈ ವರ್ಷದ ಅಂತ್ಯಕ್ಕೆ 2,169, ಮುಂದಿನ ಆರ್ಥಿಕ ವರ್ಷ 5,581 ಶೌಚಾಲಯ ನಿರ್ಮಾಣ.
* ಆಯ್ದ 60 ತಾಲೂಕುಗಳಲ್ಲಿ ಆದರ್ಶ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ ಕ್ರಮ.
* ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು ಆದರ್ಶ ವಿದ್ಯಾಲಯಗಳಲ್ಲಿ ಸೃಷ್ಟಿ ಟಿಂಕರಿಂಗ್ ಪ್ರಯೋಗಾಲಯಗಳ ಸ್ಥಾಪನೆ.
* 24,347 ಶಾಲೆಗಳಲ್ಲಿ ಗ್ರಂಥಾಲಯಗಳ ಅಭಿವೃದ್ಧಿ.
* ಚಿಕ್ಕಮಂಗಳೂರಿನಲ್ಲಿ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆ.
* ಬಂಕಾಪುರದ ಪಾಲಿ ಟೆಕ್ನಿಕ್ , ಸಹಕಾರಿ ಇಂಜಿನಿಯರಿಂಗ್ ಕಾಲೇಜು ಆಗಿ ಮೇಲ್ದರ್ಜೆಗೆ .
* ಮುಂದಿನ 5 ವರ್ಷಗಳಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಾಗಿ ಉನ್ನತೀಕರಣ.
* ರೆಫರೆನ್ಸ್ ಪುಸ್ತಕ ಮತ್ತು ಪಠ್ಯ ವಿಷಯಗಳು ಕನ್ನಡಕ್ಕೆ ಭಾಷಾಂತರ .
* ಅತ್ಯುತ್ತಮ ಸಾಧನೆ ಮಾಡುವ ವಿಶ್ವ ವಿದ್ಯಾಲಯಗಳಿಗೆ ತಲಾ 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ .
* ಪಿಎಚ್ ಡಿ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಏಕರೂಪ ವ್ಯವಸ್ಥೆ.
* ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಆರಂಭ.
* ಈ ವರ್ಷ ಎರಡು ಹೊಸ ಎನ್ ಸಿಸಿ ಘಟಕ ಸ್ಥಾಪನೆ.
* ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಉನ್ನತ ಶಿಕ್ಷಣ ಬಲವರ್ಧನೆಗೆ 125 ಕೋಟಿ ರೂಪಾಯಿ ವೆಚ್ಚ.
* ‘ಬಿಲ್ಡ್ ಟು ಸೂಟ್’ ಮಾದರಿಯಲ್ಲಿ ಮೆಟ್ರಿಕ್ ನಂತರದ 20 ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣ.
ಮಹಿಳಾ ಸಬಲೀಕರಣ, ಮಕ್ಕಳ ಅಭ್ಯುದಯ:
* ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂಪಾಯಿ ಅನುದಾನ. * ಪ್ರಸಕ್ತ ಸಾಲಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 1,800 ಕೋಟಿ ರೂಪಾಯಿ ಸಾಲ.
* ಸ್ವಂತ ಕಟ್ಟಡವಿಲ್ಲದ 1 ಸಾವಿರ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಲು ಅನುದಾನ.
* ‘ಹೊಸ ಗೃಹಿಣಿ ಶಕ್ತಿ’ ಯೋಜನೆ ಜಾರಿ;ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂಪಾಯಿ ಪ್ರೋತ್ಸಾಹ ಧನ.
* ಅರ್ಹ ವಿವಾಹಿತ ಮಹಿಳೆಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು ಪ್ರೋಫಿ ಲ್ಯಾಟಿಕ್ ಐ ಎಫ್ ಎ ಮಾತ್ರೆ ವಿತರಣೆ.
* ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ.
* ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ವಿದ್ಯಾವಾಹಿನಿ ಯೋಜನೆಯಡಿ ಉಚಿತ ಬಸ್ ಪಾಸ್ ವಿತರಣೆ .
* ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಮಾಸಾಶನ 3,000 ರೂ.ನಿಂದ 10,000ರೂ. ಗೆ ಏರಿಕೆ
* ಸ್ವ ಚೇತನ ಯೋಜನೆಯಡಿ ಅರ್ಹ ವಿಶೇಷ ಚೇತನರಿಗೆ 5,000 ಸ್ವಯಂ ಚಾಲಿತ ದ್ವಿಚಕ್ರವಾಹನ ವಿತರಣೆ.
* 25 ವರ್ಷ ಅರ್ಹತಾ ಸೇವೆ ಪೂರ್ಣಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸ್ವಯಂ ನಿವೃತ್ತಿಗೆ ಅವಕಾಶ .
* ಮಹಿಳೆಯರ ಸಬಲೀಕರಣ , ಕ್ಷೇಮಾಭಿವೃದ್ಧಿಗೆ ಒಟ್ಟಾರೆ 46,278 ಕೋಟಿ ರೂ. ಅನುದಾನ.
* ಮಕ್ಕಳ ಅಭ್ಯುದಯಕ್ಕೆ ಬಜೆಟ್ ನಲ್ಲಿ 47,256 ಕೋಟಿ. ರೂ. ಅನುದಾನ.

ಹಿಂದುಳಿದ ವರ್ಗಗಳು , ಅಲ್ಪಸಂಖ್ಯಾಂತರ ಕಲ್ಯಾಣ:
*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ. ರೂ. ಹೆಚ್ಚುವರಿ ಅನುದಾನ.
* ಉಡುಪಿ,ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ನಿರ್ಮಾಣ.
* ಬೈಲಹೊಂಗಲದ ಸಂಗೊಳ್ಳಿರಾಯಣ್ಣ ಸೈನಿಕ ಶಾಲೆ ಕಾಮಗಾರಿಗಳಿಗೆ 217 ಕೋಟಿ. ರೂ.
* ಗಂಗಾ ಕಲ್ಯಾಣ ಯೋಜನಯಡಿ 490 ಕೋಟಿ ರೂ. ವೆಚ್ಚದಲ್ಲಿ 19,731 ಫಲಾನುಭವಿಗಳಿಗೆ ಸೌಲಭ್ಯ.
* ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 596 ಕೋಟಿ ರೂ. ಹೆಚ್ಚುವರಿ ಅನುದಾನ.
* ಅಲ್ಪಸಂಖ್ಯಾಂತರ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ತರಬೇತಿಗಾಗಿ 2 ಕೋಟಿ ರೂ.
* ದೇಶ ವಿದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಅಲ್ಪಸಂಖ್ಯಾಂತ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ರಂತೆ ಶೂನ್ಯ ಬಡ್ಡಿದರದಲ್ಲಿ ಸಾಲ.
*300 ಅಲ್ಪಸಂಖ್ಯಾಂತ ಪದವಿಧರ ಮಹಿಳೆಯರಿಗೆ ಬೆಂಗಳೂರಿನಲ್ಲಿ ಉದ್ಯಮಶೀಲತಾ ತರಬೇತಿ .
* ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ 10 ಕೋಟಿ ರೂ., ಖಬರಸ್ತಾನ್ ಗಳ ಅಭಿವೃದ್ಧಿಗಳಿಗೆ 10 ಕೋಟಿ ರೂ.
* ಅಲ್ಪಸಂಖ್ಯಾಂತ ನಿಗಮಕ್ಕೆ ಅನುದಾನ 110 ಕೋಟಿ ರೂ. ಗೆ ಏರಿಕೆ. ನಿಗಮದಿಂದ 2023-24ನೇ ಸಾಲಿನಲ್ಲಿ 306 ಕೋಟಿ. ರೂ. ವೆಚ್ಚದ ಯೋಜನೆಗಳ ಜಾರಿ.
ವಸತಿ:
* ಪ್ರಸಕ್ತ ವರ್ಷ 5 ಲಕ್ಷ ಕೋಟಿ ಮನೆ ನಿರ್ಮಾಣ ಪೂರ್ಣ;5 ಸಾವಿರ ಕೋಟಿ ರೂ. ವೆಚ್ಚ.
* ಬೆಂಗಳೂರಿನಲ್ಲಿ ಪ್ರಸಕ್ತ ವರ್ಷ 20,000 ಮನೆ ; ಫಲಾನುಭವಿಗಳಿಗೆ ಹಸ್ತಾಂತರ.
* ವರ್ಷಾಂತ್ಯದಲ್ಲಿ ಎಲ್ಲಾ 3 ಲಕ್ಷ 36 ಸಾವಿರ ಕುಟುಂಬಗಳಿಗೆ ಭೂ ಮಾಲೀಕತ್ವ ಹಕ್ಕು ಪತ್ರ ವಿತರಣೆ.
* ಗೃಹ ಮಂಡಳಿಯಿಂದ 48,000 ನಿವೇಶನಗಳ ಹಂಚಿಕೆಗೆ ಕ್ರಮ.
* ನಿಗಮದಿಂದ ನಮ್ಮ ನೆಲೆ ಯೋಜನೆಯಡಿ ಆರ್ಥಿಕ ದುರ್ಬಲ ವರ್ಗದವರಿಗೆ 10 ಸಾವಿರ ನಿವೇಶ ಹಂಚಿಕೆ.
ಕಾರ್ಮಿಕ ಕಲ್ಯಾಣ:
* ಕಟ್ಟಡ ಮತ್ತು ನಿರ್ಮಾಣ ವಲಯದ 2 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ.
* ವಿದ್ಯಾನಿಧಿಯೋಜನೆಯಡಿ ಕಟ್ಟಡ ನಿರ್ಮಾಣದ ಕಾರ್ಮಿಕರ 3 ಲಕ್ಷ 80 ಸಾವಿರ ಮಕ್ಕಳಿಗೆ 543 ಕೋಟಿ ರೂ. ಸಹಾಯಧನ.
* ಹೊರ ರಾಜ್ಯದಿಂದ ವಲಸೆ ಬರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮಕ್ಕೆ ನೆರವು.
* ಹೊಸದಾಗಿ 19 ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಗಳ ಆರಂಭ.
* ಹೊಸದಾಗಿ 6 ಇಎಸ್ ಐ ಚಿಕಿತ್ಸಾಲಯಗಳ ಆರಂಭ.
*ಹೊಸದಾಗಿ ಕರ್ನಾಟಕ ಅಸಂಘಟಿತ ಕಾರ್ಮಿಕರ ನಿಧಿ ಸ್ಥಾಪನೆ .