ಸಂಕ್ಷಿಪ್ತ ಸುದ್ದಿ:
ಮುಧೋಳ: ಕೋವಿಡ್-19ನಿಂದ ಮಾನ್ಯ ಉಪ ಮುಖ್ಯಮಂತ್ರಿ ಗೋವಿಂದ್ ಎಮ್. ಕಾರಜೋಳ ಅವರು ಗುಣಮುಖರಾಗಿದ್ದು, ಮನೆಯಿಂದಲೇ ಕರ್ತವ್ಯ ಹಾಗೂ ಇಲಾಖಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ತಾವು ಗುಣಮುಖರಾಗಲು ಕ್ಷೇತ್ರದ ಹಾಗೂ ರಾಜ್ಯದ ಜನರ ಶುಭಹಾರೈಕೆಗಳಿಗೆ ಧನ್ಯವಾದಗಳನ್ನು ಹಾಗೂ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಸ್ಟಾಫ್ ನರ್ಸ್ ಗಳಿಗೆ ಕೃತಜ್ಜತೆಯನ್ನು ಸೂಚಿಸಿದ್ದಾರೆ.
ಈ ಕುರಿತು ವೈದ್ಯರ ಸಲಹೆಯಂತೆ ಮನೆಯಲ್ಲಿಯೆ ಇದ್ದು, ಮನೆಯಿಂದಲೇ ಇಲಾಖಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದಾಗಿ ತಮ್ಮ ಟ್ವೀಟ್ ಖಾತೆ ಮೂಲಕ ತಿಳಿಸಿದ್ದಾರೆ.

“ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನೂ ಗುಣಮುಖವಾಗಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ನಾನು ಹೋಂ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ.
ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಗಳ ರೂಪದಲ್ಲಿ ಹಾರೈಕೆ ಮಾಡಿದ ಸ್ಟಾಫ್ ನರ್ಸ್ ಗಳಿಗೆ ಅಭಾರಿಯಾಗಿದ್ದೇನೆ. ಶೀಘ್ರಗುಣಮುಖವಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು.”_ ಗೋವಿಂದ್ ಎಮ್. ಕಾರಜೋಳ, ಮಾನ್ಯ ಉಪ ಮುಖ್ಯಮಂತ್ರಿಗಳು.