ಸಂಕ್ಷಿಪ್ತ ಸುದ್ದಿ:
ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ನಿನ್ನೆ ಶುಕ್ರವಾರ ಜರುಗಿತು. ಇದೇ ಸಂದರ್ಭದಲ್ಲಿ ಅವರು ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿರುವ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಬರುವ ಮಾರ್ಚ್ ತಿಂಗಳ 24 ರಿಂದ 31 ರವರೆಗೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಯಿತು. ಈ ಬಾರಿ ʻ ಭಾರತಿಯ ಪ್ರದರ್ಶನ ಕಲೆಗಳ ಮಹತ್ವ ʼ ವಿಷಯದ ಮೇಲೆ ಚಿತ್ರೋತ್ಸವವನ್ನು ಏರ್ಪಡಿಸಲು ನಿರ್ಧರಿಸಲಾಯಿತು.
ಕೋವಿಡ್ ನಿಯಮಾವಳಿ ಹಾಗೂ ಮಾರ್ಗಸೂಚಿಗಳ ಅನುಸಾರವಾಗಿ ಈ ಚಿತ್ರೋತ್ಸವ ನಡೆಯಬೇಕೆಂದು ಮಾನ್ಯ ಸಿ ಎಂ ಸೂಚಿಸಿದರು.

ಚಿತ್ರೋತ್ಸವದಲ್ಲಿ ಉತ್ತಮ ಚಲನಚಿತ್ರಗಳೊಂದಿಗೆ ಚಲನಚಿತ್ರರಂಗದ ನೂರಿತ ದೇಶ ವಿದೇಶಗಳ ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗಿನ ಸಂವಾದ , ವಿಚಾರ ಸಂಕೀರಣ, ಚಿತ್ರಕಥೆ ರಚನೆ ಕಾರ್ಯಗಾರ, ಮಾಸ್ಟರ್ ಕ್ಲಾಸ್ ಮೊದಲಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಚಿತ್ರೋದ್ಯಮಗಳಿಗೆ , ವಿಧ್ಯಾರ್ಥಿಗಳಿಗೆ ಸಿನಿಮಾ ಆಸಕ್ತಿರಿಗೆ ಅನುಕೂಲವಾಗಲಿದೆ. ಕನ್ನಡ ಸಿನಿಮಾಗಳ ಸೃಜನಶೀಲ ಮುಖಗಳಗನ್ನು ವಿಶ್ವದ ನಾನಾ ದೇಶಗಳಿಗೆ ತಿಳಿಸುವ ಕೆಲಸವೂ ಈ ಮೂಲಕ ನಡೆಯುತ್ತದೆ ಎಂಬ ನಾನಾ ಅಂಶಗಳನ್ನು ಸಮಿತಿ ಸಭೆಯಲ್ಲಿ ವಿವರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಸಿ ಸಿ ಪಾಟೀಲ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕ ಡಿ ಆರ್ ಜೈರಾಜ್, ಹಿರಿಯ ಕಲಾವಿದರಾದ ಶ್ರುತಿ, ತಾರಾ ಅನುರಾಧಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಯಾದ ಅಂಜುಮ್ ಪರ್ವೇಜ್, ಆಯುಕ್ತರಾದ ಪಿ ಎಸ್ ಹರ್ಷ ಸೇರಿದಂತೆ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.