ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಬಳ್ಳಾರಿ: ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಬಿ.ಶ್ರೀರಾಮುಲು ಅವರು, ನಗರದ 13ನೇ ವಾರ್ಡ್ ಮಿಲ್ಲರ್ ಪೇಟ್‌ನಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆಯ ಕಾರ್ಯಪ್ರವೃತ್ತರಿರುವ ವೈದ್ಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡುವುದರೊಂದಿಗೆ, ಅವರ ಕಾಯರ್ವನ್ನು ಶ್ಲಾಘಿಸುತ್ತಾ ಧನ್ಯವಾದ ತಿಳಿಸಿ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಂಸದರಾದ ಫಕೀರಪ್ಪನವರು ಉಪಸ್ಥಿತರಿದ್ದರು.