- ಕಾರವಾರ: ತೆರೆದ ನೀರಿನ ಪಂಜರ ಕೃಷಿ ಯೋಜನೆ ಜಾರಿ – ಪರಿಶಿಷ್ಟ ಜಾತಿಯವರಿಗೆ ಉಚಿತ ತರಬೇತಿ, ಪರಿಕರಗಳ ಪೂರೈಕೆ_ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ.
- ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸತೀಶ್ ಕುಮಾರ್ ಸೂಪರ್ ಹೆವಿ ವ್ಹೇಟ್ ನ 91 ಕೆ.ಜಿ.ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಅವರು ಒಮ್ಮೆಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂಕಗಳಿಂದ ಮಣಿಸಿ, ಅಂತಿಮ 8ರ ಘಟ್ಟಕ್ಕೆ ಅರ್ಹತೆ ಪಡೆದರು.
- NEP 2020 ರ ಅಡಿಯಲ್ಲಿ ‘ಎಲ್ಲರಿಗೂ ಸಮಾನ ಮತ್ತು ಪ್ರವೇಶಿಸಬಹುದಾದ ಶಿಕ್ಷಣ’ ದ ದೂರದೃಷ್ಟಿಯ ಭಾಗವಾಗಿ ವಲಸೆ ಕಾರ್ಮಿಕರ ಮತ್ತು ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಲು ಮತ್ತು ಪ್ರವೇಶಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾರ್ಗಸೂಚಿ ಹೊರಡಿಸಿದೆ
- “ಎಲ್ಲಾ ರಸ್ತೆಗಳು ಒಂದೇ ರೀತಿ ಇರುವುದಿಲ್ಲ, ಅಪಾಯಗಳೂ ಒಂದೇ ರೀತಿ ಸಂಭವಿಸುವುದಿಲ್ಲ. ಯಾವುದೇ ರಸ್ತೆಯಿದ್ದರೂ ಜಾಗರೂಕತೆಯಿಂದ ವಾಹನ ಚಲಾಯಿಸಿ. ಸುರಕ್ಷಿತವಾಗಿರಿ.”_KSRSA
- ಜಪಾನ್ ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಶಟ್ಲರ್ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
- ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆ ಹಾಗೂ ಸಂಬಂಧಿತ ಎಲ್ಲ ಸ್ಥಳೀಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನಗಳನ್ನು ನೀಡುವಂತೆ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
- ಅಮೆರಿಕದ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ – ಪ್ರಧಾನಿ ನರೇಂದ್ರ ಮೋದಿ ಭೇಟಿ
- ಇಲ್ಲಿಯವರೆಗೆ ನೀಡಲಾದ ಒಟ್ಟು ಲಸಿಕೆ ಪ್ರಮಾಣ 45,07,06,257. ಕಳೆದ 24 ಗಂಟೆಗಳಲ್ಲಿ ನೀಡಲಾಗಿರುವ ಲಸಿಕೆ ಪ್ರಮಾಣ 43,92,697. (29 ಜುಲೈ, 2021, ಬೆಳಗ್ಗೆ 8.00 )
- “ಅಭಿವೃದ್ಧಿ ವಿಚಾರದಲ್ಲಿ ನೂತನ ಮುಖ್ಯಮಂತ್ರಿಗೆ ಎಲ್ಲಾ ರೀತಿಯ ಸಹಕಾರ” – ಸಿದ್ದರಾಮಯ್ಯ
- ರಾಷ್ಟ್ರೀಯ ಶಿಕ್ಷಣ ನೀತಿ-2020-ಎನ್.ಇ.ಪಿ. ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನಕ್ಕೆ ಅನುಗುಣವಾಗಿ, ಮನೋವೈದ್ಯರಿಗಾಗಿ COVID-19 ಮಧ್ಯೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಕ್ಕೆ ಮಾನಸಿಕ ಸಾಮಾಜಿಕ ಬೆಂಬಲವನ್ನು ಒದಗಿಸಲು ಮನೋದರ್ಪನ್ ಜಾರಿಗೆ ತರಲಾಗಿದೆ.
- “ವಿಶ್ವ ಹುಲಿ ದಿನ”. ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಹುಲಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಹುಲಿ ಸಂರಕ್ಷಣಾ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಬೆಂಬಲವನ್ನು ನೀಡುವುದು ಈ ದಿನದ ಹಿಂದಿನ ಮುಖ್ಯ ಉದ್ದೇಶವಾಗಿದೆ.
- “ಇಂದು ವಿಶ್ವ ಹುಲಿ ದಿನ. ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ, ಅವುಗಳ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ದೃಢ ಸಂಕಲ್ಪ ನಮ್ಮೆಲ್ಲರದ್ದಾಗಲಿ. ವಿಶ್ವದಲ್ಲಿ ಅತಿ ಹೆಚ್ಚು ಹುಲಿಗಳಿರುವ ಭಾರತದಲ್ಲಿ, ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ಸದಾ ಮುಂದಿದೆ.”_ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.
