- ದೇಶಾದ್ಯಂತ ಇಂದು 22ನೇ ವರ್ಷದ ಕಾರ್ಗಿಲ್ ವಿಜಯದಿವಸ್ ಆಚರಿಸಲಾಗುತ್ತಿದ್ದು, ವಿವಿಧ ಗಣ್ಯರು, ಯೋಧರ ತ್ಯಾಗ, ಶೌರ್ಯವನ್ನು ಸ್ಮರಿಸಿದ್ದಾರೆ. ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಬಲಿದಾನವನ್ನು ಸ್ಮರಿಸಿದ್ದು, ದೇಶ , ಸೈನಿಕರ ತ್ಯಾಗವನ್ನು ಸದಾ ಸ್ಮರಿಸಲಿದೆ.
- ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿಂದು ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶೌರ್ಯ ಚಕ್ರ ಪುರಸ್ಕೃತ ಲೆ.ಕರ್ನಲ್ ಅಜಿತ್ ವಿ.ಭಂಡಾರ್ಕರ್ ಅವರ ಆತ್ಮಚರಿತ್ರೆ ‘Saga of a Braveheart ‘ ಪುಸ್ತಕ ವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
- ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ವೈ ಸೇರಿದಂತೆ ಅನೇಕ ರಾಜಕೀಯ ಗಣ್ಯರ ಸಂತಾಪ.
- ರಂಗ ನಮನ: “ಅಭಿನೇತ್ರಿ ಜಯಂತಿಯವರು, (೧೯೪೫-೨೦೨೧) ಕಲಾ ಶಾರದೆ ಅಭಿನೇತ್ರಿ ಜಯಂತಿಯವರ ಅವರ ಆತ್ಮಕ್ಕೆ ಶಾಂತಿ ಸಿಗಲಿ.” _ಕರ್ನಾಟಕ ನಾಟಕ ಅಕಾಡೆಮಿ, ಅಧ್ಯಕ್ಷರು, ಸರ್ವ ಸದಸ್ಯರು ಮತ್ತು ಸಿಬ್ಬಂದಿವರ್ಗ.
- ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಇನ್ನಿಲ್ಲ. ‘ಜೇನುಗೂಡು’ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಜಯಂತಿ ತಮ್ಮ ವಿಶಿಷ್ಟ ಹಾಗೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ‘ನಾಗರಹಾವು’ ಎಡಕಲ್ಲು ಗುಡ್ಡದ ಮೇಲೆ, ಚಂದವಳ್ಳಿಯ ತೋಟ, ಚಕ್ರತೀರ್ಥ, ಬಹಾದ್ದೂರ್ ಗಂಡು, ಶ್ರೀಕೃಷ್ಣ ದೇವರಾಯ ಸೇರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಲನಚಿತ್ರದಲ್ಲಿ ಅವರು ಅಭಿನಯಿಸಿದ್ದರು.
- “ರಸ್ತೆ ನಿಯಮಗಳ ಅರಿವಿಲ್ಲದೆ ಮಕ್ಕಳು ವಾಹನ ಚಲಾಯಿಸಿ ಅನಾಹುತಗಳು ಸಂಭವಿಸಿರುವ ಹಲವಾರು ಉದಾಹರಣೆಗಳಿವೆ. ಅಪಾಯಕ್ಕೆ ಎಡೆ ಮಾಡಿಕೊಡಬೇಡಿ. ಕಾನೂನು ಪಾಲಿಸಿ, ಸುರಕ್ಷಿತವಾಗಿರಿ.”_ KSRSA
- ಭಾರತಕ್ಕೆ ಹೆಮ್ಮೆಯ ಕ್ಷಣ “ಯುನೆಸ್ಕೋ” ತೆಲಂಗಾಣದ ಮುಲುಗು ಜಿಲ್ಲೆಯಲ್ಲಿರುವ 13 ನೇ ಶತಮಾನದ ಐತಿಹಾಸಿಕ ರಾಮಪ್ಪ ದೇವಾಲಯವನ್ನು ಭಾರತದ 39 ನೇ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.
