ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ – NDRF ಇಂದಿನಿಂದ ವಿಜ್ಞಾನ ಭವನದಲ್ಲಿ ಎರಡು ದಿನಗಳ ‘ವಿಪತ್ತು ಪ್ರತಿಕ್ರಿಯೆಗಾಗಿ ಸಾಮರ್ಥ್ಯ ವೃದ್ಧಿ ಕುರಿತು ವಾರ್ಷಿಕ ಸಮ್ಮೇಳನ-2022’ ನ್ನು ಆಯೋಜಿಸಿದೆ.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ಹವಾಮಾನ ಮುನ್ಸೂಚನೆಯ ನಿಖರತೆ ಶೇಕಡ 100ರಷ್ಟಿದ್ದು, ಹಲವು ಪ್ರಾಕೃತಿಕ ಅವಘಡಗಳನ್ನು ತಡೆಯುವಲ್ಲಿ NDRF ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. NDRF ನ ಕಾರ್ಯಗಳನ್ನು ಮತ್ತಷ್ಟು ಸದೃಢಗೊಳಿಸಲು ಕೇಂದ್ರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಾಕೃತಿಕ ಅವಘಡಗಳು ನಡೆದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತರಬೇತಿ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ NDRF ನ್ನು ಸಜ್ಜುಗೊಳಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಯಾವುದೇ ಪ್ರಾಕೃತಿಕ ಅವಘಡಗಳು ಸಂಭವಿಸಿದಾಗ NDRF ತಂಡವನ್ನು ನಿಯೋಜನೆ ಮಾಡಿದಾಗ ಅರ್ಧಕ್ಕಿಂತ ಹೆಚ್ಚಿನ ಸಮಸ್ಯೆಗಳು ಕೂಡಲೇ ಬಗೆಹರಿಯುತ್ತವೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ವಿಭಿನ್ನ ತುರ್ತು ಪರಿಸ್ಥಿತಿಗಳಲ್ಲಿ ಷೇರುದಾರರ ಪ್ರಮುಖ ಪಾತ್ರ, ಮಾನವ ಶಕ್ತಿ ಬಲಗೊಳಿಸುವಿಕೆ ಮತ್ತು SDRF ನ ಮೂಲಸೌಕರ್ಯ, ರಸ್ತೆ ನಕ್ಷೆ ಸುಧಾರಣೆ, ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತದೆ. 2013ರಿಂದ ಮಧ್ಯಸ್ಥಗಾರರ ಸಾಮರ್ಥ್ಯ ವೃದ್ಧಿಗಾಗಿ ಈ ಸಮ್ಮೇಳನವನ್ನು NDRF ಆಯೋಜಿಸುತ್ತಿದೆ.
