ವರದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ದೇವದುರ್ಗ (ಮೇ 25): ದೇವದುರ್ಗ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಎಲ್.ಬಿ. ಅಗ್ನಿ ಇವರ ಸೇವಾ ನಿವೃತ್ತಿಕಾರ್ಯಕ್ರಮವನ್ನು ಸ್ಥಳಿಯ ಮಾದಿಗ ದಂಡೋರ (M.R.P.S.) ವತಿಯಿಂದ ಏರ್ಪಡಿಸಿ, ಮಾನ್ಯ ಎಲ್.ಬಿ.ಅಗ್ನಿ ಇವರ ಸೇವೆಯನ್ನು ಶ್ಲಾಘಿಸುತ್ತಾ ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ಮಾನಪ್ಪ ಮೇಸ್ತ್ರಿ ಬಲ್ಲದವರ್ M.R.P.S. ವತಿಯಿಂದ ಸನ್ಮಾನದೊಂದಿಗೆ ಸೇವಾ ನಿವೃತ್ತಿಯಿಂದ ಬೀಳ್ಕೊಟ್ಟರು.
“ಮಾನ್ಯ ಎಲ್.ಬಿ.ಅಗ್ನಿ ಇವರು ದೇವದುರ್ಗ ತಾಲೂಕಿನಲ್ಲಿ ಸುಮಾರು ಹದಿನೆಂಟು ತಿಂಗಳುಗಳ ಕಾಲ ಪೊಲೀಸ್ ಸೇವೆಯಲ್ಲಿ ಮರಳು ಸಾಗಾಣಿಕೆಯ ನಕಲಿ ರಾಯಲ್ಟಿ, ನಕಲಿ ನೋಟು ಚಲಾವಣೆ ಮತ್ತು ಹಲವಾರು ಬೈಕು ಕಳ್ಳತನವನ್ನು ಪತ್ತೆ ಹಚ್ಚಿ, ಕಾನೂನಾತ್ಮಕ ಕಾರ್ಯಗಳನ್ನು ಮಾಡಿದ್ದಾರೆ, ಸ್ಥಳಿಯ ಸಹ ಸಿಬ್ಬಂದಿಯೊಂದಿಗೆ ಹಾಗೂ ಸಂಘ-ಸಂಸ್ಥೆಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟದೊಂದಿಗೆ ಸೇವೆ ಸಲ್ಲಿಸಿದ್ದಾರೆ, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ “ ಎಂದು ಮಾದಿಗ ದಂಡೋರ ದ ಜಿಲ್ಲಾಧ್ಯಕರಾದ ಮಾನಪ್ಪ ಮೇಸ್ತ್ರಿ ಬಲ್ಲದವರ್ ತಿಳಿಸಿದರು.

ಸರಳವಾಗಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾದಿಗ ದಂಡೋರದ ಇತರ ಪದಾಧಿಕಾರಗಳು ಮತ್ತು ಸದಸ್ಯರುಗಳು, ತಾಲೂಕಿನ ಪ್ರಮುಖರು ಹಾಜರಿದ್ದರು.