ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ದೇವದುರ್ಗ: ತಾಲೂಕ ಘಟಕದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈಧ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು, ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೊಜಿತವಾಗಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿಯನ್ನು ಕೈಗೊಂಡು, ನಂತರ ಮಾನ್ಯ ತಹಸೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿತು.

ಪ್ರಮುಖವಾಗಿ, ಈ ಹಿಂದೆಯು ಮುಷ್ಕರ ನಡೆಸುತ್ತಾ ಹಾಗೂ ಮನವಿಯನ್ನು ಸಲ್ಲಿಸುತ್ತಾ ಬಂದಿರುವುದನ್ನು ತಿಳಿಸುತ್ತಾ, ಕೋವಿಡ್-19 ಸಾಂಕ್ರಾಮಿಕತೆಯಲ್ಲಿಯೂ 100 ಕ್ಕೂ ಹೆಚ್ಚು ಇಲಾಖೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ತಿಳಿಸುತ್ತಾ, ಈ ಹಿಂದೆ ಕರ್ತವ್ಯ ನಿರ್ವಹಣಾ ಸಮಯದಲ್ಲಿ ಮರಣ ಹೊಂದಿದ ಸಿಬ್ಬಂದಿಗೆ ಕನಿಷ್ಟ ಸೌಲಭ್ಯದ ತಾರತಮ್ಯ ಹೋಗಲಾಡಿಸಬೇಕು, ವೇತನ ತಾರತಮ್ಯ ಹೋಗಲಾಡಿಸಬೇಕು, ಇಲಾಖೆಗೆ ಸಂಬಂಧಸಿದಂತೆ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು, ಏಕ ರೂಪದ ವೇತನ ಜಾರಿ, ಬೋನಸ್ ಹೆಚ್ಚಳ, ನೇಮಕಾತಿ ಮಯೋಮಿತಿಯ ಹೆಚ್ಚಳ, ವರ್ಗಾವಣೆ ಕುರಿತಂತೆ 14 ಬೇಡಿಕೆಗಳ ಈಡೇರಿಕೆಗಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿಯನ್ನು ಕೈಗೊಂಡು, ತಮ್ಮ ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ತಿಳಿಸುತ್ತಾ, ತಹಸೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾ ರ್ಯಾಲಿ ಮತ್ತು ಮನವಿ ಪತ್ರ ಸಲ್ಲುವಿಕೆಯ ಪ್ರಕ್ರಿಯೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ವರ್ಮ, ಕಾರ್ಯದರ್ಶಿಗಳಾದ ಡಾ. ರಿಯಾಜ್, ಗುರು ಪ್ರಸಾದ್, ರಾಜುಗೌಡ ಗೋರಿಕಾರ್, ಓಂಕಾರ, ರವಿ ಶುಕ್ಲ, ಶೀಲವಂತಯ್ಯ ಸ್ವಾಮಿ, ರವಿಕುಮಾರ್, ತಿಮ್ಮರಾಜು, ಪ್ರಕಾಶ್ ಹಾಗೂ ಇನ್ನಿತರ ನೌಕರರು ಪಾಲ್ಗೊಂಡಿದ್ದರು.