ಲಿಂಗಸಗೂರು: ಡಾ. ಎ.ಜಿ. ನಂದಿಕೋಲಮಠ ಅವರು ಗುರುವಾರ ಬೆಳಗಿನಜಾವ 01 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿರಾದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಡಾ.ಅಮರಯ್ಯ ಗುರುಪಾದಯ್ಯ ನಂದಿಕೋಲಮಠ, ಆನೆಹೊಸೂರು ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ 90 ವರ್ಷ ವಯಸ್ಸಾಗಿತ್ತು, ಸ್ಥಳಿಯ ಕೆಂಬ್ರೀಜ್ ಸ್ಕೂಲ್ ನ ಸ್ಥಾಪನೆಯಲ್ಲಿ ಹಾಗೂ ವೀರಶೈವ ಸಮಾಜದಲ್ಲಿ ತಮ್ಮದೇ ಆದ ಛಾಪನ್ನು ಹಾಗೂ ಸೇವೆಯನ್ನು ಸಲ್ಲಿಸಿದವರಾಗಿದ್ದರು.
ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ 02 ಗಂಟೆಗೆ ಲಿಂಗಸಗೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.