||ಏಕದಂತಂ ಮಹಾಕಾಯಂ
ತಪ್ತ ಕಾಂಚನಸನ್ನಿಭಮ್
ಲಂಬೋದರಂ ವಿಶಾಲಾಕ್ಷಂ
ವಂದೇಹಂ ಗಣನಾಯಕಮ್ ||
|| ಓಂ ತತ್ಪೂರುಷಾಯ ವಿದ್ಮಹೇ
ವಕ್ರತುಂಡಾಯ ದೀಮಹೇ
ತನ್ನೊದಂತಿ ವಿಘ್ನೇಶ್ವರ ಪ್ರಚೋದಯಾತ್ ||
ಭಾರತದ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಮಹಾನ ಹಬ್ಬಗಳಲ್ಲಿ ಗಣೇಶ ಚತುರ್ಥಿ ಹಬ್ಬವು ಒಂದು. ಎಲ್ಲ ಧರ್ಮದವರೂ ವಿಘ್ನೇಶ್ವರನ ಪರಮ ಭಕ್ತರೂ ಯಾವದೇ ಜಾತೀ ಬೇಧವಿಲ್ಲದೆ ವಿಘ್ನವಿನಾಶಕನ ಸ್ಮರಿಸುವ ಹೆಮ್ಮೆಯ ನಾಡು ಕನ್ನಡಿಗರ ನಾಡು, ಕನ್ನಡನಾಡು.
ಗಜಾನನೆಂದರೆ ಚಿಕ್ಕಮಕ್ಕಳಿಂದ ಹಿರಿಯರಿಗು ಎಲ್ಲಿದ ಖುಷಿ ಹಾಗಿದ್ದರೆ, ಗಜಾನನು ಹೇಗೆ ಜನಿಸಿದ ಮತ್ತು ಪುಜ್ಯ ಸ್ಥಾನ ಹೇಗೆ ದೊರಕಿತು ಎನ್ನುವದರಬಗ್ಗೆ ಸಂಕ್ಷೀಪ್ತ ವಿವರಣೆ:
ಗಣಪತಿ ಎಂದರೆ ಯಾರು ?
ಗಣಪತಿಯು ಹೇಗೆ ಜನಿಸಿದ?
ಗಣಪತಿಯು ಎಲ್ಲ ದೇವತೆಗಳಿಗಿಂತಲೂ ಅಗ್ರಸ್ಥಾನ ಹೇಗೆ ಪಡೆದ !
ಕೃತ ಯುಗ ಕಾಲದಲ್ಲಿ ದಟ್ಟ ರಣ್ಯದಲ್ಲಿ ಒರ್ವ ರಾಕ್ಷಸ ಭಗವಂತನ ಕುರಿತು ತಪಸ್ಸು ಮಾಡತೊಡಗಿದ ಆ ರಾಕ್ಷಸನ ಹೆಸರು (ಗಜಾಸುರ) ಅಂತ ಸಕಲ ಜೀವರಾಶಿಗಳಿಗೂ ಸರ್ವಕ್ಕೂ ಕಾರಣಿಭೂತನಾದ ಜಗದೊಡೆಯ ಜಗದೀಶ (ಪರಶಿವನ ) ಕುರಿತು ತಪಸ್ಸು ಮಾಡತೊಡಗಿದ ಅನೇಕ ವರ್ಷಗಳ ಕಾಲ ಮಾಡಿದ ತಪಸ್ಸಿಗೆ ಭಗವಂತ ತನ್ನ ಕುರಿತು ದ್ಯಾನ ಮಾಡಿದ್ದಕ್ಕೆ ಹೇಗೆ ಆಶೀರ್ವಾದ ಮಾಡಿದರೂ, ಇಲ್ಲಿ ಎಲ್ಲರಿಗೂ ಅಚ್ಚರಿ ಎನಿಸಬಹುದು ರಾಕ್ಷಸನಿಗೆ ಯಾಕೆ ಶಿವನು ವರವನ್ನು ಕೊಡಲು ಹೊದ ಅಂತ ಮೊದಲೇ ಅವರು ರಾಕ್ಷಸರು ಕೆಟ್ಟ ಗುಣವುಳ್ಳವರೆಂದು ಹೇಳುತ್ತೇವೆ, ಆದರೇ ಭಗವಂತ ಸ್ಮರಣೆ ಯಾರಾದರು ಮಾಡಬಹುದು ಯಾರೆ ಇರಲಿ ಆವ್ಯಕ್ತಿ ಒಳ್ಳೆಯವನೆ ಇರಲಿ, ಕೆಟ್ಟವನೆ ಇರಲಿ, ಶ್ರದ್ದಾಭಕ್ತಿ ಇಂದ ಯಾರು ಧ್ಯಾನಿಸುವರೋ ಅವರಿಗೆ ಬೆಡಿದ್ದು ಕೊಡುವಾತ ಮಹಾದೇವನ ಕಾರ್ಯ.
ಉದಾಹರಣೆಗೆ, ಭಸ್ಮಾಸುರ ಇವನು ರಾಕ್ಷಸ ಗುಣವುಳ್ಳವನು ಇತನ ತಪಸ್ಸನ್ನು ಮೆಚ್ಚಿ ಮಹಾದೇವ, ನಿನಗೇನು ವರ ಬೇಕು ಕೇಳು ಎಂದಾಗ, ಭಸ್ಮಾಸುರ ರಾಕ್ಷಸ ತಾನು ಯಾರ ತಲೆ ಮೇಲೆ ಕೈ ಇಟ್ಟರೂ ಅವರೂ ಭೂದಿಯಾಗಬೇಕೆಂದ ವರ ಬೇಡಿದ. ಆಗ ಭಗವಂತ (ಮಹಾದೇವ ) ತಥಾಸ್ತೂ ಎಂದ, ಆಗ ಭಸ್ಮಾಸುರ ರಾಕ್ಷಸ ಮಹಾದೇವ ಕೊಟ್ಟಂತ ವರ ನಿಜಾನೊ ಸುಳ್ಳೊಎಂಬುದು ಪರಿಕ್ಷಿಸಲು ಮೊದಲಿಗೆ ಮಹಾದೇವ ಕೊಟ್ಟವರವನ್ನು ಮಹಾದೇವನಮೇಲೆ ಪ್ರಯೊಗಿಸಲು ಹೊದ ಎಂಬುದು ಆದಿಪುರಾಣ ಗಳಲ್ಲಿ ರಚಿತವಾಗಿವೆ ಹಾಗೇ, ಗಜಾಸುರನ ಭಕ್ತಿಗೆ ಸೋತ ಮಹಾದೇವ ಗಜಾಸುರ ತಪಸ್ಸು ಮಾಡುತ್ತಿರವಾಗ ಕಾಡಿನತ್ತ ಬಂದು ಮಹಾದೇವ ಗಜಾಸುರನನ್ನು ಕೇಳಿದ ನೀನು ಏತಕ್ಕಾಗಿ ನನ್ನ ಕುರಿತು ಧ್ಯಾನುಸುತ್ತಿರುವೆ ಎಂದಾಗ ಗಜಾಸುರ ರಾಕ್ಷಸ, ನಾನು ಒಂದು ವರವನ್ನು ಕೇಳುವ ಕೊಡುವೆಯ ಎಂದನು, ಮಹಾದೇವ, ಯಾರು ನನ್ನನ್ನು ಭಕ್ತಿ ಇಂದ ಪ್ರಾರ್ಥಿಸುವರೋ ಅವರಿಗೆ ಬೇಡಿದ ಇಷ್ಟಾರ್ಥ ದಯಪಾಲಿಸುವದು ನನ್ನ ಕರ್ತವ್ಯ ಎಂದನು ಆಗ ಗಜಾಸುರ ರಾಕ್ಷಸ ನನಗೆ ಭಾಷೆ ಕೊಡು ಎಂದ ಮಹಾದೇವನು ಭಾಷೆಯನ್ನು ಕೊಟ್ಟಾಗ ಗಜಾಸುರ ರಾಕ್ಷಸ ನೀನು ಇನ್ನು ಮುಂದೆ ಸಧಾಕಾಲ ನನ್ನ ಹೃದಯ ಮಂದಿರದಲ್ಲಿ ವಾಸಿಸಬೇಕು ಎಂದನು. ಮಹಾದೇವ ಕೊಟ್ಟ ಮಾತಿನಂತೆ ಗಜಾಸುರ ರಾಕ್ಷಸ ಹೃದಯದಲ್ಲಿ ನೆಲಸಿದ.
ಜಗದೊಡೆಯನಾದ ಮಹಾದೇವನು ಲೋಕೊದ್ದಾರಕ ನಿಲ್ಲದ ಜಗತ್ತು ಅಲ್ಲೊಲ ಕಲ್ಲೊಲವಾಯಿತು, ಇತ್ತ ಪರಶಿವನ ಅರ್ಧಾಂಗಿಣಿಯಾದ (ಪಾರ್ವತಿದೇವಿ) ತನ್ನ ಪತಿದೇವನಾದ ಜಗದೊಡೆಯ (ಮಹಾದೇವನ) ಬರುವಿಕೆಗಾಗಿ ಕಾಯುತ್ತಾ ಇದ್ದಳು,
ಪಾರ್ವತಿದೇವಿ ಪ್ರತಿದಿನ ಸ್ನಾನ ಪೂಜೆ ನಂತರ ಪತಿದೇವನ ಪಾದಪೂಜೆ ಮಾಡಿ ಪಾದೋದಕ ಸೇವಿಸಿ ನಂತರ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗತ್ತಾ ಇದ್ದಳು ಆದರೆ ಮಹಾದೇವ. ಎಷ್ಟೋ ದಿನಗಳು ಗತಿಸಿದರೂ ಬರಲೆ ಇಲ್ಲ ಆಗ ಪಾರ್ವತಿದೇವಿ ಮಹಾದೇವನ ಚಿಂತೆಯಲ್ಲಿ ಸ್ನಾನ ಇಲ್ಲ ಪೂಜೆ ಇಲ್ಲ ಪ್ರಸಾದ ಇಲ್ಲ. ಪ್ರತಿದಿನ ಸ್ನಾನ ಪೂಜೆ ನಂತರ ಪತಿದೇವನ ಪಾದಪೂಜೆ ಮಾಡಿ ಪಾದೋದಕ ಸೇವಿಸಿ ನಂತರ ಪ್ರಸಾದ ಸ್ವೀಕರಿಸುವ ಪದ್ದತಿ ಪಾರ್ವತಿದೇವಿಯ ಪದ್ದತಿ ಆದರೆ ಜಗದೊಡೆಯಳು ಚಿಂತಿಯಲ್ಲಿ ಪ್ರಸಾದವನ್ನೆ ಬಿಟ್ಟಳು ಭಗವಂತನ ಚಿಂತೆಯಲ್ಲಿ ಮುಳಗಿದ ಪ್ರಸಂಗವನ್ನು ಕಂಡ. ನಾರದಮುನಿಯು ಪಾರ್ವತಿದೇವಿ ಬಳಿಗೆ ಬಂದು ಯಾತಕ್ಕಾಗಿ ಚಿಂತಿಸುವಿರಿ ಎಂದಾಗ ಪಾರ್ವತಿದೇವಿ ನಡೆದ ಸಂಗತಿ ತಿಳಿಸಿದಳು ಜಗದೊಡೆಯನಾದ ಮಹಾದೇವನು ಅನೇಕ ದಿನಗಳು ಕಳೆದವು ಇನ್ನೂ ಬಂದಿಲ್ಲ ಅದಕ್ಕಾಗಿ ಚಿಂತಿಸುತ್ತಿರುವೆ ಎಂದಳು, ನಾರದಮುನಿಯು ಪಾರ್ವತಿದೇವಿಗೆ ಶಿರಬಾಗಿ ಮಾತೆ ನಾನು ನನ್ನ ತಂದೆಯನ್ನು ಹುಡುಕಿ ಕರೆತರುವೆ ಚಿಂತಿಸಬೆಡಿ ಎಂದು ಹೇಳಿ (ಮಹಾದೇವ)ನನ್ನು ಹುಡುಕುವ ಪ್ರಯತ್ನದಲ್ಲಿ ತಲ್ಲೀನನಾದನು, ಕೊನೆಗೆ ಒಂದು ದಿನ ಮಹಾದೇವನು (ಗಜಾಸುರ )ಎಂಬ ರಾಕ್ಷಸನ ಹೃದಯ ಮಂದಿರದಲ್ಲಿ ವಾಸಿಸಿರುವದನ್ನು ಅರಿತ (ನಾರದಮುನಿಯು) ಮಹಾದೇವನನ್ನು ಕರೆದುಕೊಂಡು ಬರುವುದರ ಬಗ್ಗೆ ಆಳವಾಗಿ ವಿಚಾರಿಸಿ ಮಹಾದೇವನನ್ನು ಕರೆದುಕೊಂಡುಬರಲು ಉಪಾಯ ಮಾಡಿದ, ಬ್ರಹ್ಮನಿಗೆ ಡಮರುಗ ಬಾರಿಸಲು ಹೇಳಿದ, ವಿಷ್ಣುವಿಗೆ ಹೆಣ್ಣಿನ ವೇಶದಲ್ಲಿ ನೃತ್ಯ ಮಾಡಲು ಹೇಳಿದ, ಪಾರ್ವತಿದೇವಿಗೆ ಸುಂದರವಾಗಿ ಹಾಡಲು ಹೇಳಿದನು.
ಬ್ರಹ್ಮ ವಿಷ್ಣು ಮತ್ತು ಪಾರ್ವತಿದೇವಿ, ನಾರದರು ಹೇಳಿದಂತೆ ಗಜಾಸುರ ಇದ್ದ ಕಾಡಿನಲ್ಲಿ ಗಜಾಸುರ ಇದ್ದ ಸ್ಥಳಕ್ಕೆ ಬಂದು ನೃತ್ಯ ಮತ್ತು ಸಂಗೀತದ ಜೊತೆ ಡಮರುಗ ಬಾರಿಸುತ್ತ ಮಹಾದೇವನ ಬರುವಿಕೆಗಾಗಿ ಕಾಯತ್ತಾ ತಮ್ಮ ಕಾರ್ಯದಲ್ಲಿ ನಿರತರಾದರು, ನೃತ್ಯ ಮತ್ತು ಸಂಗೀತ ಜೊತೆ ಢಮರುಗ ಭಾರಿಸುವ ಶಬ್ದ ಕೇಳಿದ ಮಹಾದೇವನಿಗೆ ತಿಳಿಯಿತು, ಮಹಾದೇವನು ತನ್ನ ಮಡದಿ ಮತ್ತು ಸಹೋದರರು ಬಂದ ವಿಷಯವನ್ನರಿತನು.
ಮಹಾದೇವನು ಗಜಾಸುರ ರಾಕ್ಷಸನಿಗೆ ಹೇಳುತ್ತಾನೆ, ನನ್ನ ಮಡದಿ ಮತ್ತು ಸಹೋದರರು ನನ್ನ ಸಲುವಾಗಿ ಬಹಳ ಚಿಂತಾ ಕ್ರಾಂತರಾಗಿದ್ದಾರೆ ಅದಕ್ಕಾಗಿ ನನ್ನನು ಕಳುಹಿಸಿಕೊಡು ನಿನಗೆನು ವರಬೇಕು ಕೇಳು ಕೊಡುವೆ (ಒಂದು ವರವಲ್ಲ ಮೂರು ವರ ಕೊಡುವೆ) ಎಂದಾಗ. ಮಹಾದೇವ ಬರುವ ವಿಷಯ ತಿಳಿದು ಬ್ರಹ್ಮ ವಿಷ್ಣು ಮತ್ತು ಪಾರ್ವತಾದೇವಿಗೆ ಎಲ್ಲಿದ ಖುಷಿ, ಆಗ
ಪಾರ್ವತಿದೇವಿಯು ತನ್ನ ಪತಿದೇವನು ಗಜಾಸುರನ ಹೃದಯದಲ್ಲಿ ವಾಸ ಮಾಡಿದಾಗಿನಿಂದ ಪತಿಯ ಪಾದೋದಕ ವಿಲ್ಲದೆ ನೀರು ಸಹ ಕುಡಿಯುತ್ತಿರಲಿಲ್ಲ ತನ್ನ ಪತಿದೇವ (ಮಹಾದೇವ) ಬರುವ ವಿಚಾರ ತಿಳಿದು ಪಾರ್ವತಿದೇವಿ ಅವಸರದಿಂದ ತನ್ನ ಮಹಾಮನೆಯತ್ತ ಸಾಗಿದಳು ಪತಿದೇವನ ಚಿಂತೆಯಲ್ಲಿ ಅನೇಕ ದಿನಗಳು ಕಳೆದಂತ ಸಮಯದಲ್ಲಿ ಪಾರ್ವತಿದೇವಿ ದೇಹವು ಬೆವರಿನಿಂದ ಕುಡಿದ ದೇಹವನ್ನು ತಿಕ್ಕಿ ಮಣ್ಣನ್ನು ಕ್ರೋಢಿ ಕರಿಸಿ ಮಣ್ಣಿನಿಂದ ಸುಂದರವಾದ ಮೂರ್ತೀಯನ್ನು ಮಾಡಿ ಅದಕ್ಕೆ ಜೀವಕಳೆಯನ್ನು ತುಂಬಿದ್ದಳು ಮಹಾದೇವ ಬರುವನು ಎಂಬುದ ಅರಿತ ಪಾರ್ವತಿದೇವಿ ಅವಸರದಿಂದ ಸ್ನಾನಕ್ಕೆ ಹೊಗುವಾಗ ತಾನೆ ತನ್ನ ದೇಹದಮಣ್ಣಿನಿಂದ ನಿರ್ಮಿಸಿರುವ ಆ ಮಗುವನ್ನು ಕರೆದು ನಾನು ಸ್ನಾನ ಮಾಡಿಬರುವವರೆಗೂ ಯಾರನ್ನು ಒಳಗಡೆ ಬಿಡಬೇಡ ಎಂದಾಗಿ ಅಪ್ಪಣೆ ಮಾಡಿ ಪಾರ್ವತಿದೇವಿ ಸ್ನಾಸಕ್ಕೆ ಹೋದಳು,
ಗಜಾಸುರ ರಾಕ್ಷಸನು ಮಹಾದೇವನಲ್ಲಿ ಮೂರುವರನ್ನು ಕೇಳುತ್ತಾನೆ
1. ನನಗೆ ರಾಕ್ಷಸ ಎಂಬ ಅಪವಾದ ದಿಂದ ಮುಕ್ತಿಕೊಡು
2. ನನಗೆ ಪೂಜ್ಯಸ್ಥಾನ ಮತ್ತು ಒಳ್ಳೆ ಹೆಸರು ಬರಬೇಕು
3.ನನ್ನ ಮೈ ಬಣ್ಣ ಸದಾ ನಿನ್ನ ಶರೀರದ ಮೇಲೆ ಇರಬೇಕು
ಮಹಾದೇವ : ತಥಾಸ್ಥು ಎಂದು ಆಶೀರ್ವಾದಿಸಿ ಅಲ್ಲಿಂದ ತನ್ನ ಮಹಾಮನೆಯತ್ತ ಪ್ರಯಾಣವನ್ನು ಮಾಡಿದ ಮಹಾಮನೆಗೆ ಬಂದ ಮಹಾದೇವ ತನ್ನ ಮಡದಿಯಾದ ಪಾರ್ವತಿದೇವಿಯನ್ನು ನೋಡಲೆಂದು ಅವಸರದಿಂದ ಬಂದಾಗ. ಮನೆಯ ಬಾಗಿಲಲ್ಲಿ ಒರ್ವ ಬಾಲಕನನ್ನು ಕಂಡು ನೀನು ಯಾರೆಂದನು !
ಬಾಲಕ: ನಾನು ಪಾರ್ವತಿದೇವಿ ಮಗನು ನೀನು ಯಾರೆಂದು ಮಹಾದೇವನನ್ನು ಕೇಳಿದಾಗ
ಮಹಾದೇವ: ನಾನು ಪಾರ್ವತಿದೇವಿ ಪತಿ (ಗಂಡನೆಂದನು) ಹೇಳಿ ಅವಸರದಿಂದ ಒಳಹೋಗಲು
ಬಾಲಕ : ನನ್ನ ತಾಯಿ ಅಪ್ಪಣೆ ಇಲ್ಲದೆ ಯಾರಿಗೂ ಪ್ರವೆಶವಿಲ್ಲ ಎಂದು ನುಡಿದನು
ಕೆಲಸಮಯ ಮಹಾದೇವನಿಗೂ ಮತ್ತು ಬಾಲಕನಿಗೂ ವಾದ-ವಿವಾದದ ನಂತರ
ಮಹಾದೇವ : ಅತೀ ಕೋಪಿತನಾದ ಮಹಾದೇವ ತ್ರೀಶೂಲದಿಂದ ಬಾಲಕನ ಶಿರ ಛೇದನ ಮಾಡಿದ.
ಪಾರ್ವತಿದೇವಿ ಸ್ನಾನ ಮುಗಿಸಿ ಪತಿದೇವನ ( ಮಹಾದೇವ) ಪಾದಪೂಜೆ ಮಾಡಲೆಂದು ಹೊರಗಡೆ ಬರಲು ಬಾಲಕನ ಶಿರ ಛೇದನವನ್ನು ನೋಡಿ ಅತೀಯಾಗಿ ಭಾವಾವೇಶಗೊಂಡ ಪಾರ್ವತಿದೇವಿಯು “ಆ ಮಗು ನನ್ನ ಮಗು ನನ್ನ ಶರೀರದ ಮಣ್ಣಿನಿಂದ ಮನುಷ್ಯನಾಗಿ ಮಾಡಿ ಅತೀ ಅಕ್ಕರೆಯಿಂದ ಬೆಳೆಸಿದ ನನ್ನ ಮಗುವಿನ ಜೀವವು ಮರಳಿ ನನಗೆ ಬೇಕು” ಎಂದು ದುಖಿಃತಳಾದ ಪಾರ್ವತಿದೇವಿಯನ್ನು ನೋಡಿ ಮಹಾದೇವ ಮನವು ಮಿಡಿಯಿತು
ಮಹಾದೇವನು ತನ್ನ ಶಿವಧೂತರನ್ನು ಕರೆದು ಉತ್ತರ ದಿಕ್ಕಿಗೆ ಮುಖಮಾಡಿ ಮಲಗಿರುವ ಯಾವದೇ ಪ್ರಾಣಿಯಿರಲಿ ಅದರ ರುಂಡವನ್ನು ಕತ್ತರಿಸಿ ತನ್ನಿ ಎಂದು ಜೋರಾಗಿ ಕೂಗಿ ಹೇಳಿ ಆಜ್ಞಾಪಿಸಿದನು,
ಮಹಾದೇವನು ಶಿವಧೂತರಿಗೆ ಜೋರಾಗಿ ಕೂಗಿ ಹೇಳಿದ ಮಾತು ಕಾಡಿನಲ್ಲಿದ್ದ ಗಜಾಸುರನಿಗೆ ಕೇಳಿಸಿತು ಮಹಾದೇವನು ನನ್ನ ಸಲುವಾಗಿನೆ ಈ ಕಾರ್ಯ ಮಾಡಿರುವನು ಎಂದರಿತ ಗಜಾಸುರ…
ಗಜಾಸುರ ರಾಕ್ಷಸ : ರಾಕ್ಷಸ ಗುಣವನ್ನು ಬಿಟ್ಟು ಆನೆಯ ರೂಪದಲ್ಲಿ ಉತ್ತರದಿಕ್ಕಿಗೆ ಮುಖಮಾಡಿ ಮಲಗಿದನು
ಶಿವಧೂತರು ಕಾಡನ್ನೆಲ್ಲ ಸುತ್ತಿದರು ಯಾವೊಂದು ಪ್ರಾಣಿನು ಉತ್ತರ ದಿಕ್ಕಿಗೆ ಮುಖಮಾಡಿ ಮಲಗಿರಲಿಲ್ಲ ಅತೀ ಬೇಸತ್ತ ಶಿವಧೂತರು ಮಹಾದೇವನ ಅಪ್ಪಣೆ ಮೀರುವಂತಿಲ್ಲ ಎನು ಮಾಡುವದು ಎಂದು ಚಿಂತಿಸುತ್ತ ಬರುವಾಗ ದೂರದಲ್ಲಿ ಯಾವದೊ ಒಂದು ಪ್ರಾಣಿ ಕಂಡಂತಾಯಿತು, ಹೋಗಿ ನೋಡಿದರೆ ಉತ್ತರ ದಿಕ್ಕಿಗೆ ಮುಖಮಾಡಿ ಮಲಗಿರುವ ಪ್ರಾಣಿ ಆನೆಯನ್ನು ಕಂಡ ದೃಶ್ಯ ಶಿವಧೂತರಿಗೆ ಎಲ್ಲಿಲ್ಲದ ಆನಂದ ಖುಷಿ, ಆಗ ಮಹಾದೇವನ ಅಪ್ಪಣೆ ಯಂತೆ ಶಿವಧೂತರು ಆ ಆನೆಯ ಶಿರವನ್ನು (ರುಂಡವನ್ನು) ಕಡೆದರು.

1. ||ಗಜಾಸುರ ರಾಕ್ಷಸನು ತಾನು ಬೇಡಿದ ಒಂದನೇ ವರ ಪೂರ್ಣಗೊಳ್ಳುವದು||
ಇಲ್ಲಿಗೆ (ಗಜಾಸುರ ರಾಕ್ಷಸನು ತಾನು ಬೇಡಿದ ಒಂದನೇ ವರ ಮುಕ್ತಿ ಕೊಡು ಎಂಬುದು ) ಇಲ್ಲಿಗೆ ಗಜಾಸುರ ರಾಕ್ಷಸ ಜೀವನ ಮಹಾದೇವ ನಿಂದ ಮುಕ್ತಿ ಹೊಂದಿತು. ಮುಂದೆ ಆನೆಯ ರುಂಡವನ್ನು ತಂದು ಮಹಾದೇವ ತಾನೆ ಸಂಹರಿಸಿದ ಆ ಮಗುವಿನ ಮುಂಡಕ್ಕೆ(ಕುತ್ತಿಗೆಯ ಕೆಳಬಾಗಕ್ಕೆ ) ಜೋಡಿಸಿ ಮಗುವಿಗೆ ಪುನರ್ಜನ್ಮವನ್ನು ನೀಡಿದ ಆಗ ಎಲ್ಲರೂ ಈ ಬಾಲಕನಿಗೆ ಎನೆಂದು ನಾಮಕರಣ ಮಾಡಬೇಕು ಎಂದು ವಿಚಾರಿಸುವಾಗ, ಮಹಾದೇವನು: ಆನೆಯ ಶಿರವನ್ನು ಹೊಂದಿದ ಮಗುವಿಗೆ( ಗಜಾನನ ) ಎಂದು ನಾಮಕರಣ ಮಾಡಿದರು, (ಆಗ ಗಜಾಸುರ ರಾಕ್ಷಸ ಹೆಸರು ಮುಕ್ತಿಹೊಂದಿ ಗಜಾನನ ಎಂದಾಗಿ ಪರಿವರ್ತನೆ ಗೊಂಡಿತು)
ಕೆಲದಿನಗಳ ನಂತ ಮತ್ತೆ (ಪಾರ್ವತಿದೇವಿ ಮಹಾದೇವನಿಗೆ ಕೇಳುತ್ತಾಳೆ ) “ದೇವ ಎಲ್ಲರು ನನ್ನ ಮಗನಿಗೆ ಮಹಾದೇವ ನ ಉಗ್ರ ಕೋಪಕ್ಕೆ ಶಿರವನ್ನು ಕಳೆದುಕೊಂಡ ಮಗನೆಂದು ಅಪಮಾನ ಮಾಡುವರು ಇದಕ್ಕೆ ನೀವೆ ಪರಿಹಾರ ಕೊಡಬೇಕು” ಎಂದಾಗ
ಮಹಾದೇವನು: “ಎಲ್ಲ ದೇವಾನು ದೇವತೆಗಳನ್ನು ಶಿವದೂತರನ್ನು ಋಷಿ ಸಮೂಹದವರನ್ನು ಕರೆದು ಇನ್ನು ಮುಂದೆ ಯಾರದರೂ ಗಜಾನನಿಗೆ (ಗಣಪನಿಗೆ) ಯಾರದರು ಅವಹೇಳನ ಮಾಡಿದರೆ ಅತೀ ಶಾಪಕ್ಕೆ ಗುರಿಯಾಗುವಿರಿ ಎಲ್ಲ ಸರ್ವ ವಿಘ್ನವನ್ನು ಕಳೆವ ಶಕ್ತಿಯನ್ನು ವಿಘ್ನೇಶ್ವರನಾದ ಗಣಪನಿಗೆ ಕೊಡುವೆ ಸರ್ವ ದೇವತೆಗಳ ಪೂಜೆಗಿಂತಲೂ ಗಣಪತಿಗೆ ಅಗ್ರಸ್ಥಾನ ಕೊಡಲಾಗುವದು ನನ್ನ ಪೂಜೆಗಿಂತಲೂ ಸಹ ಗಣಪನ ಪೂಜೆಗೆ ಅತಿ ಮಹತ್ತರ ಸ್ಥಾನ ಕೊಡಲಾಗುವದು” ಎಂದು ಅಪ್ಪಣೆ ಯನ್ನು ಮಾಡಿದನು ಅಂದಿನಿಂದ ಇಂದಿನವರೆಗೂ ಯಾವದೇ ಪೂಜೆ ಮಾಡಲಿ ಗಣಪತಿ ಪೂಜೆ ಮಾಡಿ ನಂತರ ಉಳಿದ ದೇವರ ಪೂಜೆ ಮಾಡಲಾಗುವದು
2. ||ಗಜಾಸುರ ರಾಕ್ಷಸ ನ ಎರಡನೇ ವರ ಪೂರ್ಣಗೊಂಡಿತು||
ಇಲ್ಲಿಗೆ ಗಜಾಸುರ ರಾಕ್ಷಸನು ಮಹಾದೇವನಲ್ಲಿ ಬೇಡಿದ. ಎರಡನೇ ವರ, ನನಗೆ ಒಳ್ಳೆ ಹೆಸರು ಅತೀ ಪೂಜ್ಯಸ್ಥಾನ ಬೇಕೆಂದಿದ್ದನು ಹಾಗೇ ಮಹಾದೇವನು ಗಜಾಸುರ ರಾಕ್ಷಸನ ರುಂಡವನ್ನು ಆನೆಯ ರೂಪದಲ್ಲಿ ಗಣಪತಿಗೆ ಇಟ್ಟು ಎಲ್ಲ ದೇವತೆಗಳಿಗಿಂತ ಪೂಜ್ಯ ಸ್ಥಾನವನ್ನು ಕೊಟ್ಟನು.
3. ||ಗಜಾಸುರ ರಾಕ್ಷಸ ನ ಮೂರನೇ ವರ ||
ನನ್ನ ಮೈ ಬಣ್ಣ ಸಧಾಕಾಲ ನಿನ್ನ ಶರೀರದ ಮೇಲಿರಬೇಕೆಂಬುದಾಗಿತ್ತು, ಹಾಗಾದರೇ ಗಜಾಸುರ ರಾಕ್ಷಸ, ರಾಕ್ಷಸ ಗುಣದಿಂದ ಮುಕ್ತಿಯನ್ನು ಹೊಂದಿರುವದು ಆನೆಯ ರೂಪದಲ್ಲಿ (ಆನೆಯ ಮೈ ಬಣ್ಣ. ಬೂದಿ ಬಣ್ಣ) ಹಾಗೇ ಮಹಾದೇವನ ಮೈ ಬಣ್ಣ ಸಹ ಭೂದಿ ಬಣ್ಣ. ಸದಾ ದೇವಹನ್ನೆಲ್ಲ ಭಸ್ಮದಿಂದ ಆಲಂಕರಿಸಿಕೊಂಡಿರುವದರಿಂದ ಸ್ಮಶಾನ ವಾಸಿ ಭೂದಿಯನ್ನು ಮೈಯಲ್ಲ ಆವರಿಸಿಕೊಂಡ ಬ್ರಹ್ಮಾಂಡ ಒಡೆಯನೆಂದು ಕರೆಯುವರು.
ಈ ರೀತಿಯಲ್ಲಿ ಮಹಾದೇವನು ತನ್ನ ಲೀಲೆಗಳಿಂದ ವಿಘ್ನೇಶ್ವರನಿಗೆ ಜನ್ಮವನ್ನು ನೀಡಿ ಸರ್ವ ವಿಘ್ನನಿವಾರಕನೆಂದು ಹೆಸರು ವಾಸಿಮಾಡಿದನು.
***
ಶ್ರೀ ಪರಮ ಪೂಜ್ಯ ತ್ರೀಕಾಲ ಜ್ಞಾನಿ, ಧಾಸೋಹ ರತ್ನ ಶ್ರೀ ಶ್ರೀ ಶ್ರೀ ಗುರು ನೀಲಕಂಠಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ~ M.ಗುಡದೂರಮಠ ಜಿಲ್ಲಾ:ಕೊಪ್ಪಳ.
ಸಂಗ್ರಹಣೆ- ಲೇಖನ ಪ್ರಸ್ತುತಿ:

_ಶ್ರೀಪೂಜ್ಯರ ಮರಿಗಳಾದ ಶ್ರೀಚಂದ್ರಶೇಖರಯ್ಯ ಸ್ವಾಮಿ R. ಹಿರೇಮಠ. ಸುಕ್ಷೇತ್ರ: M.ಗುಡದೂರಮಠ. (ಆರ್ಯ ಭೋಗಾಪೂರ)
ಸರ್ವ ಸದ್ಭಕ್ತರಿಗೂ ಸುಕ್ಷೇತ್ರ ಗುಡದೂರ, ಸಜ್ಜಲಗುಡ್ಡ (ಕಂಬಳಿಹಾಳ) ಶ್ರೀ ಮಠದ ವತಿಯಿಂದ ಗಣೇಶ ಚತುರ್ಥಿಯ ಶುಭಾಶಯಗಳು.