Tuesday, February 18, 2025
Homeಸುದ್ದಿಕುಷ್ಟಗಿ: ಸಿಡಿಲಿನಿಂದ ಮೃತನಾದ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ-ಸಾಂತ್ವಾನ.

ಕುಷ್ಟಗಿ: ಸಿಡಿಲಿನಿಂದ ಮೃತನಾದ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ-ಸಾಂತ್ವಾನ.

ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.

ಕುಷ್ಟಗಿ: ಇತ್ತೀಚಿಗೆ ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದ ರೈತ ಮುದಿಯಪ್ಪ ಟಕ್ಕಳಕಿ ಸಿಡಿಲು ಬಡಿದು ಮೃತಪಟ್ಟಿದ್ದ, ಮೃತನ ಕುಟುಂಬಕ್ಕೆ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಮತ್ತು ತಹಸೀಲ್ದಾರ್‌ ಎಮ್.ಸಿದ್ದೇಶ್‌ ಬೇಟಿನೀಡಿ ಸಾಂತ್ವಾನ ಹೇಳಿ, ಮೃತನ ಪತ್ನಿಗೆ  5  ಲಕ್ಷ ರೂ. ಚೆಕ್ಕನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮೃತ ರೈತನ ಕುಟುಂಬ ಭಾವುಕರಾಗಿದ್ದಕ್ಕೆ ಶಾಸಕರಾದ ಬಯ್ಯಾಪುರ “ಆಗಬಾರದ ಘಟನೆ ಆಗಿಹೊಗಿದೆ, ಸಮಾಧಾನದಿಂದಿರಿ, ನಾವು-ತಾಲೂಕ ಆಡಳಿತ ನೊಂದವರೊಂದಿಗಿದ್ದೆವೆ, ದುಖಃ ಭರಿಸುವ ಶಕ್ತಿ ಭಗವಂತ ನೀಡಲಿ” ಎಂದು ಸಾಂತ್ವಾನ ಹೇಳಿ ಮನೋಸ್ಥೈರ್ಯ ತುಂಬಿದರು.

ಆದ ಘಟನೆಗೆ ತ್ವರಿತವಾದ ಪರಿಹಾರ ನೀಡಿದ್ದಕ್ಕೆ ಮೃತನ ಕುಟುಂಬ ಹಾಗೂ ಗ್ರಾಮದ ಜನತೆ ಶಾಸಕರಿಗೆ ಮತ್ತು ತಹಸೀಲ್ದಾರರಿಗೆ ಕೃತಜ್ಞತೆ ಸೂಚಿಸಿದೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news