ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೌಕಾನೆಲೆ ಸಿಬ್ಬಂದಿಯೊಂದಿಗೆ ಇಂದು ಬೆಳಗ್ಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ನಿನ್ನೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನಾ ಸಿಬ್ಬಂದಿಯನ್ನು ಭಾರತ ಇಂದಿಗೂ ಹೆಮ್ಮೆಯಿಂದ ಗೌರವಿಸುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತದ ಮಾತುಗಳಿಗೆ ಗೌರವ ಲಭಿಸುತ್ತಿದೆ. ನಮ್ಮ ವಿಚಾರಧಾರೆಗಳು ವಿಶ್ವದ ಗಮನ ಸೆಳೆಯುತ್ತಿವೆ ಎಂದು ತಿಳಿಸಿದರು. ಈ ವೇಳೆ ಶಾಸಕಿ ರೂಪಾಲಿ ನಾಯಕ್, ಅಡ್ಮಿರಲ್ ಆರ್ ಹರಿಕುಮಾರ್ ಹಾಗೂ ಉಪ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.