ಕಳೆದ ತಿಂಗಳು ನವೆಂಬರ್ ನಲ್ಲಿ ಸಂಗ್ರಹವಾದ ಒಟ್ಟಾರೆ ಜಿಎಸ್ ಟಿ 1,45,867 ಕೋಟಿ ರೂಪಾಯಿಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 11ರ ವೃದ್ಧಿಯನ್ನು ದಾಖಲಿಸಿದೆ.
ಮಾಸಿಕ ಸಂಗ್ರಹವಾಗುತ್ತಿರುವ ಜಿಎಸ್ ಟಿ ಆದಾಯ ಸತತ 9ನೇ ತಿಂಗಳು 1 ಲಕ್ಷ 40 ಸಾವಿರ ಕೋಟಿ ರೂಪಾಯಿ ಮೀರಿದೆ. ಕಳೆದ ವರ್ಷ ಇದೇ ತಿಂಗಳ ಆದಾಯಕ್ಕೆ ಹೋಲಿಸಿದರೆ, ಆಮದಾಗುವ ವಸ್ತುಗಳ ಮೇಲಿನ ಜಿಎಸ್ ಟಿ ಶೇಕಡ 20ರಷ್ಟು ಹೆಚ್ಚಳವಾಗಿದ್ದರೆ, ದೇಶೀಯ ವಹಿವಾಟಿನ ಆದಾಯ ಶೇಕಡ 8ರಷ್ಟು ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಕಳೆದ ನವೆಂಬರ್ ನಲ್ಲಿ 10 ಸಾವಿರದ 238 ಕೋಟಿ ರೂಪಾಯಿಗಳ ಜಿಎಸ್ ಟಿ ಸಂಗ್ರಹವಾಗಿದ್ದು, ಕಳೆದ ವರ್ಷ ನವೆಂಬರ್ ನಲ್ಲಿ ಸಂಗ್ರಹವಾಗಿದ್ದ 9 ಸಾವಿರದ 48 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಪ್ರತಿಶತ 13ರಷ್ಟು ವೃದ್ಧಿ ದಾಖಲಿಸಿದೆ.
_CLICK to Follow-Support us on DailyHunt