- ಬೆಂಗಳೂರು: ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರೀ ವಚನಾನಂದ ಶ್ರೀಗಳನ್ನು ಸಿ ಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್ ಹಾಗೂ ಶಾಸಕರಾದ ರೇಣುಕಾಚಾರ್ಯ ಉಪಸ್ಥಿತರಿದ್ದರು.
- ಚಿಕ್ಕಬಳ್ಳಾಪುರ: ಜಿಲ್ಲೆಯ ಬೋಯಿಪಲ್ಲಿ ಗ್ರಾಮದ ನೇಕಾರ ವೆಂಕಟರಮಣ ಅವರು ಕೈಮಗ್ಗ ಜವಳಿ ಇಲಾಖೆಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
- ಕರ್ನಾಟಕದ ಇಂದಿನ ಕೋವಿಡ್-19 ವಿವರ: ಹೊಸ ಪ್ರಕರಣಗಳು 1805, ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 1854, ಒಟ್ಟು ಸಕ್ರೀಯ ಪ್ರಕರಣಗಳು 24328, ಕೋವಿಡ್-19 ನಿಂದ ಇಂದು ಮೃತ ಪಟ್ಟವರ ಸಂಖ್ಯೆ 36, ಸೋಂಕಿನ ಶೇಕಡಾವಾರು ಪ್ರಮಾಣ 1.11% , ಮೃತಪಟ್ಟವರ ಶೇಕಡಾವಾರು ಪ್ರಮಾಣ 1.99%.
- ತಮಿಳುನಾಡಿನಲ್ಲಿ ಲಾಕ್‌ಡೌನ್ ಅನ್ನು ಆಗಸ್ಟ್ 23 ರವರೆಗೆ ವಿಸ್ತರಿಸಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ಪೂಜಾ ಸ್ಥಳಗಳಲ್ಲಿ ಸಾರ್ವಜನಿಕರಿಂದ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.
- ತೆಲಂಗಾಣ : ಸಂಗಾರೆಡ್ಡಿಯಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
- ಹಿಮಾಚಲ ಪ್ರದೇಶ: ಸಿರ್ಮೌರ್ ನ ಶಿಲ್ಲಾಯಿಯ ಬೊಹ್ರಾಡ್ ಖಡ್ ಬಳಿ NH 707 ನಿಂದ ಖಾಸಗಿ ಬಸ್ ಸ್ಕಿಡ್ ಆಗಿದೆ. ಅಪಘಾತದ ಸಮಯದಲ್ಲಿ 22 ಜನರು ಬಸ್ಸಿನಲ್ಲಿದ್ದರು. ಕೊನೆಯ ಪ್ರಯಾಣಿಕನನ್ನು ರಕ್ಷಿಸುವವರೆಗೂ ಚಾಲಕ ಬಸ್ಸನ್ನು ನಿಯಂತ್ರಿಸಿದ ನಂತರ ಅವರೆಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ನಂತರ ಚಾಲಕನನ್ನು ಪ್ರಯಾಣಿಕರು ರಕ್ಷಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
- ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದ ಅಮರನಾಥಜಿ ದೇಗುಲದ ಮಂಡಳಿಯ ಕಛೇರಿ ಹಾಗೂ ಯಾತ್ರಿ ನಿವಾಸದ ಶಿಲಾನ್ಯಾಸ ಮಾಡಿದರು. ಒಮ್ಮೆ ಪೂರ್ಣಗೊಂಡ ಯಾತ್ರಿ ನಿವಾಸವು ಸುಮಾರು ಮೂರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ.
- ಆಂಧ್ರಪ್ರದೇಶ: “ NEP 2020 ಆಧರಿಸಿ ಫೌಂಡೇಶನ್ ಶಾಲೆಗಳ ಅನುಷ್ಠಾನವನ್ನು ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸುಮಾರು 57,000 ಶಾಲೆಗಳು 6 ವಿಭಾಗಗಳ ಅಡಿಯಲ್ಲಿ ಇರುತ್ತವೆ. ಶಾಲೆಗಳನ್ನು ಸ್ಥಳಾಂತರಿಸಲು, ನವೀಕರಿಸಲು 16,000 ಕೋಟಿ ರೂಪಾಯಿಗಳ ಖರ್ಚು ”_ ಆಂಧ್ರ ಶಿಕ್ಷಣ ಸಚಿವ.
- “ಬೌನ್ಸ್ ಸಂಸ್ಥೆಯು ಹಳೆಯ 100 ಸ್ಕೂಟರ್‌ಗಳಿಗೆ ವಿದ್ಯುತ್‌ಚಾಲಿತ ವಾಹನದ ಮೋಟಾರ್‌ಗಳನ್ನು ಅಳವಡಿಸುವ ಮೂಲಕ EVಗೆ ಪರಿವರ್ತಿಸಿದೆ. ಇದು ವಿದ್ಯುತ್‌ಚಾಲಿತ ವಾಹನ ಅಳವಡಿಕೆಯನ್ನು ಹೆಚ್ಚಿಸಲು ಕಾರಣವಾಗುವ ಪರಿವರ್ತನಾಕಾರಿ ಹೆಜ್ಜೆಯಾಗಿದೆ.”_ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ.
- ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿ. ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ. ಶಾಲೆಗಳನ್ನು ಎರಡು ಹಂತದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ ನಿಬಂಧನೆಗಳಿಗೊಳಪಟ್ಟಂತೆ, ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಲು ತೀರ್ಮಾನ; ಮಾರ್ಗಸೂಚಿಗಳ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು. ಕೋವಿಡ್ ತೀವ್ರತೆ ನೋಡಿಕೊಂಡು ಆಗಸ್ಟ್ ತಿಂಗಳಾಂತ್ಯಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿ ಶಾಲೆ ಆರಂಭಿಸಲು ತೀರ್ಮಾನ ! ರಾಜ್ಯದಲ್ಲಿಇಂದಿನಿಂದ ಕಟ್ಟು ನಿಟ್ಟಾದ ರಾತ್ರಿ ಕರ್ಫ್ಯೂ (ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ).
