- ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಎದುರಾಗಬಹುದಾದ ಹಿನ್ನೆಲೆಯಲ್ಲಿ ಬೆಳಗಾವಿಯ ನಿಪ್ಪಾಣಿ ಸೇರಿದಂತೆ ವಿವಿಧೆಡೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳ ಚೆಕ್ ಪೋಸ್ಟ್ ಗೆ ಭೇಟಿ – ವಸ್ತುಸ್ಥಿತಿ ಪರಿಶೀಲನೆ.
- “ಇಂದು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಲಯನ್ಸ್ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು. ಡಾ. ಬಿ.ಆರ್. ರವಿಕಾಂತೇಗೌಡ. ಐ.ಪಿ.ಎಸ್. ರವರು, ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿ ಯಶಸ್ವಿಗೊಳಿಸಿದರು.” _ಬೆಂಗಳೂರು ನಗರ ಸಂಚಾರ ಪೊಲೀಸ್.
- ರಾಜ್ಯಸಭೆ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಉಪ ಸಭಾಪತಿ ಹರಿವಂಶ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
- ತಮಿಳುನಾಡು: ಮಧುರೈನ ಪಾಂಡಿ ಕೋವಿಲ್ ಬಳಿಯ ಅಮ್ಮಾ ಮೈದಾನದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ* (NSG) ಯ 150 ಕ್ಕೂ ಹೆಚ್ಚು ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಭಯೋತ್ಪಾದನೆ ನಿಗ್ರಹ ಭದ್ರತಾ ಸಮರಾಭ್ಯಾಸ ನಡೆಸಿದರು. ಸಂರಕ್ಷಿತ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಪಡೆಗಳು ಪೂರ್ವಾಭ್ಯಾಸವನ್ನೂ ನಡೆಸಿತು.
- ಟೋಕಿಯೋ ಓಲಂಪಿಕ್ಸ್: ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿಕುಮಾರ್ ದಹಿಯಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಭಾಶಯ ತಿಳಿಸಿದ್ದಾರೆ.
- “ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ರಾಜ್ಯದಿಂದ ಬೆಂಗಳೂರು ನಗರಕ್ಕೆ ಬರುತ್ತಿರುವವರ ಬಗ್ಗೆ ಗಮನಹರಿಸಲು 11 ತಂಡಗಳನ್ನು ರಚಿಸಲಾಗಿದೆ” _ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ.
- “ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳು ಮುಂಬರುವ ಹಬ್ಬಗಳ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದಕ್ಕೆ ನಿರ್ಬಂಧ ಹೇರಬೇಕು” _ ಕೇಂದ್ರ ಆರೋಗ್ಯ ಸಚಿವಾಲಯ.
- “ಜರ್ಮನಿಯ ವಿರುದ್ಧ ತೀವ್ರ ಹೋರಾಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ತಂಡವು ಅತ್ಯುತ್ತಮ ವೃತ್ತಿಪರತೆಯನ್ನು ಪ್ರದರ್ಶಿಸಿತು ಮತ್ತು ಇಡೀ ರಾಷ್ಟ್ರವು ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತದೆ.” – ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು.
- ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಂಗೇರಿಯಿಂದ ಉತ್ತಮ ಉತ್ಪಾದನಾ ಅಭ್ಯಾಸಗಳ ಪ್ರಮಾಣಪತ್ರವನ್ನು ಪಡೆದಿದೆ. ಇದರೊಂದಿಗೆ, ಭಾರತ್ ಬಯೋಟೆಕ್ ಜಾಗತಿಕ ಗುಣಮಟ್ಟದ ಪ್ರಮಾಣಿತದಲ್ಲಿ ನಾವೀನ್ಯತೆ ಮತ್ತು ಲಸಿಕೆಗಳ ಉತ್ಪಾದನೆಯಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ.
- ವಿಶ್ವ ಸ್ತನ್ಯಪಾನ ಸಪ್ತಾಹ- ಆಗಷ್ಟ್ 1 ರಿಂದ 7 ರವರೆಗೆ: “ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲುಣಿಸುವುದನ್ನು ಆರಂಭಿಸಿ, ಆರು ತಿಂಗಳವರೆಗೆ ವಿಶೇಷವಾಗಿ ಎದೆಹಾಲು ಉಣಿಸುವುದರಿಂದ ನವಜಾತ ಶಿಶುಗಳ ಮರಣವನ್ನು ಗಣನೀಯವಾಗಿ ನಿಯಂತ್ರಿಸಬಹುದು.”_ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
- ಕೊಪ್ಪಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಬಳ್ಳಾರಿ ವತಿಯಿಂದ, ಕೋವಿಡ್ 19 ಕುರಿತ ಉಚಿತ ಲಸಿಕೆ ಬಗ್ಗೆ ವಾಹನ ಮೂಲಕ ಜಾಗ್ರತೆ ಮೂಡಿಸುವ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಶ್ರೀಮತಿ ಬಿ. ಫೌಜಿಯಾ ತರುನ್ನುಮ್ ಚಾಲನೆ ನೀಡಿದರು.
- ಬೆಳಗಾವಿ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ವತಿಯಿಂದ ಬೆಳಗಾವಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಕೋವಿಡ್ ಲಸಿಕಾಕರಣ ಹಾಗೂ ಮುನ್ನೆಚ್ಚರಿಕೆ ಕ್ರಮ ಕುರಿತು ಸಂಗೀತ ಮತ್ತು ನಾಟಕ ತಂಡದ ಕಲಾವಿದರಿಂದ ಜನಜಾಗೃತಿ ಮೂಡಿಸಿದರು.
