- ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಿನ್ನೆ ಕನ್ನಡ ಸೇರಿದಂತೆ ಸುಮಾರು 20 ಭಾಷೆಗಳ ಸಾಹಿತ್ಯ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ ಅವರ “ಗಾಂಧಿ ಕಥನ” ಕೃತಿಯು ವಾರ್ಷೀಕ ಪುಸ್ತಕ ಪ್ರಶಸ್ತಿ, ಬಸು ಬೇವಿನಗಿಡದ ಅವರು ಮಕ್ಕಳಿಗಾಗಿ ರಚಿಸಿರುವ “ಓಡಿ ಹೋದ ಹುಡುಗ” ಬಾಲ ಪುರಸ್ಕಾರ, ಎಚ್ ನಾರಾಯಣಸ್ವಾಮಿ ಅವರ “ತೊಗಲ ಚೀಲದ ಕರ್ಣ” ಮಹಾಕಾವ್ಯವು ಯುವ ಪುರಸ್ಕಾರಕ್ಕೆ ಆಯ್ಕೆ ಗೊಂಡಿವೆ, ಒಟ್ಟು 7 ಕವನ 2 ಕಾದಂಬರಿಗಳು 5 ಸಣ್ಣಕಥೆಗಳು 2 ನಾಟಕಗಳು 1 ಜೀವನ ಚರಿತ್ರೆ 1ಆತ್ಮಚರಿತ್ರೆ 1ವಿಮರ್ಶೆ 1ಮಹಾಕಾವ್ಯಕ್ಕೆ ಪ್ರಶಸ್ತಿ ಲಭ್ಯ .
- ರೈತರಿಗಾಗಿ ಮಾಹಿತಿ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಎರಡನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನವು ಜನೇವರಿ 15 2022 ರವರೆಗೆ ಮುಂದುವರೆಯಲಿದೆ.
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೀರಠ್ ನಲ್ಲಿ ಜನೇವರಿ 02 ರಂದು ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಹಾಗೂ ಕೈಲಿ ಗ್ರಾಮಗಳಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು.
- ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ 10ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸಲಿದ್ದಾರೆ.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಜಿಎಸ್‌ಟಿ ಕೌನ್ಸಿಲ್‌ನ 46 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
“ಸರ್ಕಾರದ ಕೋವಿಡ್-19 ಸೋಂಕು ನಿಯಂತ್ರಣ ನಿಯಮಗಳನ್ನು ಪಾಲಿಸಿ, ಇದು ಸ್ಕೈ ನ್ಯೂಸ್ RTWT ಕಳಕಳಿ “