Tuesday, February 18, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಈ ಹೊತ್ತಿನ ಪ್ರಮುಖ ಸುದ್ದಿಗಳು !

ಈ ಹೊತ್ತಿನ ಪ್ರಮುಖ ಸುದ್ದಿಗಳು !

  • ಮುಂಬೈ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದಿಗೆ 13 ವರ್ಷ. 2008ರ ನವೆಂಬರ್ 26ರಂದು ತಾಜ್ ಹೋಟೆಲ್, ಶಿವಾಜಿ ಟರ್ಮಿಲ್ ಸೇರಿದಂತೆ ಹಲವೆಡೆ ನಡೆದ ಭಯೋತ್ಪಾದಕ ದಾಳಿಯಲ್ಲಿ ವಿದೇಶಿಯರೂ ಸೇರಿದಂತೆ 174 ಮಂದಿ ಸಾವನ್ನಪ್ಪಿದ್ದರು.
  • 26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದವರಿಗೆ ನನ್ನ ಹೃತ್ಪೂರ್ವಕ ನಮನಗಳು ಮತ್ತು ಸಂತ್ರಸ್ತರಿಗೆ ನಮನಗಳು. ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಭದ್ರತಾ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ರಾಷ್ಟ್ರವು ಯಾವಾಗಲೂ ಕೃತಜ್ಞರಾಗಿರಬೇಕು.” – ರಾಷ್ಟ್ರಪತಿ ರಮಾನಾಥ್ ಕೋವಿಂದ್.
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂವಿಧಾನ ಕುರಿತು ಚರ್ಚೆಗಳು, ಕ್ಯಾಲಿಗ್ರಾಫ್ ಮಾಡಿದ ಸಂವಿಧಾನ ಮತ್ತು ಭಾರತದ ಸಂವಿಧಾನದ ಡಿಜಿಟಲ್ ಪ್ರತಿಯನ್ನು ಬಿಡುಗಡೆ ಮಾಡಿದರು. ಸಂವಿಧಾನದ ಆನ್‌ಲೈನ್ ರಸಪ್ರಶ್ನೆಗೆ ಚಾಲನೆ ನೀಡಿದರು.
  • ಭಾರತ, ರಷ್ಯಾ ಹಾಗೂ ಚೈನಾ ವಿದೇಶಾಂಗ ಸಚಿವರ 18ನೇ ಸಭೆ ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಲಿದೆ.
  • ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ದೇವ್ ಅವರನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಚುನಾವಣೆ ನಡೆಸಲು ದೆಹಲಿಯ ಎನ್‌ಸಿಟಿಯ ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದೆ.
  • ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ನಿನ್ನೆ ನಡೆದ ಶಾಂಘೈ ಸಹಕಾರ ಮಂಡಳಿ- SCO ಮುಖ್ಯಸ್ಥರ 20ನೇ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಜಕಿಸ್ತಾನದ ಅಧ್ಯಕ್ಷತೆಯಲ್ಲಿ ನೂರ್‌ಸುಲ್ತಾನ್‌ ನಲ್ಲಿ SCO ಮುಖ್ಯಸ್ಥರ 20ನೇ ಸಭೆ ವರ್ಚುವಲ್ ಮೂಲಕ ನಡೆಯಿತು.
  • ಹಟ್ಟಿ ಚಿನ್ನದ ಕಂಪನಿ ನಿಯಮಿತದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿನ್ನೆಹಸ್ತಾಂತರ ಮಾಡಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ.ಡಿ.ವಜ್ಜಲ್, ಸಂಸ್ಥೆಯ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ದಾವಣಗೆರೆ, ಚಿತ್ರದುರ್ಗ , ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
  • ಭಾರತದ ಸಂವಿಧಾನ ದಿನ ಆಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪುಷ್ಪನಮನ ಸಲ್ಲಿಸಿದರು.
  • ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ನೂತನ ನಾಯಕನಾಗಿದ್ದಾರೆ. ಟೀಮ್ ಪೇನ್ ಬದಲು ಕಮಿನ್ಸ್ ಗೆ ನಾಯಕತ್ವ ಕೊಡಲಾಗಿದೆ.
Advertisement

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news