- ನೌಕಾಯಾನಕ್ಕೆ ನೆರವು ನೀಡುವ ವಿಧೇಯಕವನ್ನು ರಾಜ್ಯಸಭೆ ಇಂದು ಅಂಗೀಕರಿಸಿತು.
- ಕಾಶ್ಮೀರ ವಿಶ್ವವಿದ್ಯಾಲಯ ಘಟಿಕೋತ್ಸವ; ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಭಾಗಿ.
- ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಕುರಿತಂತೆ ಚರ್ಚಿಸಲು ಇಂದು ಸಂಜೆ 7 ಗಂಟೆ ಬಿಜೆಪಿ ಶಾಸಕಾಂಗ ಸಭೆ.
- “ಒಟ್ಟು ವಿದ್ಯುತ್ ಉತ್ಪಾದನ ಸಾಮರ್ಥ್ಯದಲ್ಲಿ ಶೇ.39ರಷ್ಟು ವಿದ್ಯುತ್ ಉತ್ಪಾದನೆಯು ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಉತ್ಪಾದನೆಯಾಗುತ್ತಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸುವ ಹಾದಿಯಲ್ಲಿದೆ”. _ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಆರ್ ಕೆ ಸಿಂಗ್.
- ಗುಜರಾತ್ ರಾಜ್ಯದಲ್ಲಿರುವ ಹರಪ್ಪ ನಾಗರೀಕತೆ ಕಾಲದ ಧೋಲವಿರ ನಗರವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ.
- ರಾಯಚೂರು ಜಿಲ್ಲೆಯ ಮುದ್ದುಗೋಟ್ ಗ್ರಾಮದಲ್ಲಿ ನೀರಿನಿಂದ ಆವೃತಗೊಂಡ ಮರದಲ್ಲಿ ಸಿಲುಕಿಕೊಂಡಿದ್ದ ಕೋತಿಗಳನ್ನು ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದರು.
- ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರನ್ನು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಕಿರಣ್ ಋಜೂಜು, ನಿಶಿತ್ ಪ್ರಾಮಾಣಿಕ್, ಜಿ.ಕಿಶನ್ ರೆಡ್ಡಿ ಅವರಿಂದ ಅಭಿನಂದನೆ.
- ಬಾಗಲಕೋಟೆ ಜಿಲ್ಲೆಯ ಅಲಗೂರು ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದ 11ವರ್ಷದ ಬುದ್ಧಿಮಾಂದ್ಯ ಬಾಲಕನನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ ಸಿಬ್ಬಂದಿಗಳು ರಕ್ಷಿಸಿದರು.
- ಇಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ- ಸಿ ಆರ್ ಪಿ ಎಫ್ ನ 83ನೇ ಸಂಸ್ಥಾಪನಾ ದಿನ.
- “ಎಲ್ಲಾ CRPF ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ CRPF ಸಂಸ್ಥಾಪನಾ ದಿನದ ಶುಭಾಶಯಗಳು. CRPF ರಾಷ್ಟ್ರಕ್ಕೆ ಅತ್ಯಂತ ಧೈರ್ಯ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದೆ. ಮುಂದಿನ ವರ್ಷಗಳಲ್ಲಿ ಅವರಿಗೆ ಯಶಸ್ಸನ್ನು ಬಯಸುತ್ತೇನೆ.” _ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್.
- ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಸಿ ಎಂ ಸಿದ್ಧರಾಮಯ್ಯ .
- 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಫಿಂಗರ್‌ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್ ಅಗತ್ಯವಿಲ್ಲ ಎಂದು UIDAI ತಿಳಿಸಿದೆ. ಹಾಗೂ 5ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ನವೀಕರಣ ಕಡ್ಡಾಯ ಎಂದು ಕೂಡಾ ಪ್ರಾಧಿಕಾರ ತಿಳಿಸಿದೆ.
