ಪ್ರಧಾನಿ ಅಭಿನಂದನೆ :“ನೀರಜ್ ಚೋಪ್ರಾ ಜೊತೆ ಮಾತನಾಡಿದೆ ಮತ್ತು ಚಿನ್ನ ಗೆದ್ದ ಅಭಿನಂದನೆಗಳು! ಟೋಕಿಯೊ 2020 ರ ಉದ್ದಕ್ಕೂ ಪ್ರದರ್ಶನಗೊಂಡ ಅವರ ಕಠಿಣ ಪರಿಶ್ರಮ ಮತ್ತು ಪರಿಶ್ರಮಕ್ಕಾಗಿ ಶ್ಲಾಘನೆಗೆ ಪಾತ್ರರಾದ ಅವರು ಅತ್ಯುತ್ತಮ ಕ್ರೀಡಾ ಕೌಶಲ್ಯ ಮತ್ತು ಕ್ರೀಡಾ ಸಾಮರ್ಥ್ಯವನ್ನು ಹೊರತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು.”_ ಪ್ರಧಾನಿ ನರೇಂದ್ರ ಮೋದಿ.
ನಮ್ಮ ಮೆಟ್ರೋ: ಪಶ್ಚಿಮ ವಿಸ್ತರಣೆಯಾದ ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಶಾಸನಬದ್ಧ ಅವಶ್ಯಕತೆಗಳನ್ನು ಕಾರ್ಯಗತಗೊಳಿಸಲು, ನೇರಳೆ ಮಾರ್ಗದ ವಿಜಯನಗರ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ದಿನಾಂಕ 11 ಮತ್ತು 12 ಆಗಷ್ಟ್ ಎರಡು ದಿನಗಳ ಅವಧಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡು ಆಗಷ್ಟ 13 ರ ಬೆಳಿಗ್ಗೆ 07 ರಿಂದ ಪುನರಾರಂಭ. ಈ ದಿನಾಂಕಗಳಲ್ಲಿ ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯ, ಹಸಿರು ಮಾರ್ಗದ ನಾಗಸಂದ್ರದಿಂದ ರೇಷ್ಮೆ ಸಂಸ್ಥೆ ನಿಲ್ದಾಣಗಳ ಮೆಟ್ರೋ ರೈಲುಗಳ ಸೇವೆ ಎಂದಿನಂತೆ ಲಭ್ಯ ಎಂದು ಬಿಎಂಆರ್ ಸಿಎಲ್ (ನಮ್ಮ ಮೆಟ್ರೋ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ ಎಸ್ ಆರ್ ಟಿ ಸಿ ಯಿಂದ “ಗೋಲ್ಡನ್ ಪಾಸ್ “: “ಚಿನ್ನದ ಹುಡುಗ ಶ್ರೀ.ನೀರಜ್ ಛೋಪ್ರಾರವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತಾ, ಕೆ ಎಸ್ ಆರ್ ಟಿ ಸಿ ಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ಶ್ರೀ.ನೀರಜ್ ಛೋಪ್ರಾ ವರಿಗೆ ಕೆ ಎಸ್ ಆರ್ ಟಿ ಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ. ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಜೀವಿತಾವಧಿವರೆಗೆ ಪ್ರಯಾಣಿಸಬಹುದಾಗಿದೆ. ಜೈಹಿಂದ್.”_ ಶಿವಯೋಗಿ ಸಿ. ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ.
ಹುಬ್ಬಳ್ಳಿ: “ಸಚಿವ ಸಂಪುಟ ವಿಸ್ತರಣೆ ಅಥವಾ ಖಾತೆ ಹಂಚಿಕೆಯಾದಾಗ ಅಸಮಾಧಾನ, ಅತೃಪ್ತಿ ಸಹಜ. ಅದನ್ನು ಸರಿಪಡಿಸಲಾಗುವುದು”_ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕದ ಇಂದಿನ ಕೋವಿಡ್-19 ವಿವರ: ಹೊಸ ಪ್ರಕರಣಗಳು 1610, ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 1640, ಒಟ್ಟು ಸಕ್ರೀಯ ಪ್ರಕರಣಗಳು 24266, ಕೋವಿಡ್-19 ನಿಂದ ಇಂದು ಮೃತ ಪಟ್ಟವರ ಸಂಖ್ಯೆ 32, ಸೋಂಕಿನ ಶೇಕಡಾವಾರು ಪ್ರಮಾಣ 1.08% , ಮೃತಪಟ್ಟವರ ಶೇಕಡಾವಾರು ಪ್ರಮಾಣ 1.98%.
