Saturday, December 28, 2024
Homeಪ್ರಕಟಣೆಲಿಂಗಸಗೂರು : ಉಪವಿಭಾಗದವರು ಸ್ವ-ಗ್ರಾಮಕ್ಕೆ ಮರಳಲು ಅವಕಾಶ-ಪಿ.ಡಿ.ಓ / ಕಂಟ್ರೋಲ್ ರೂಂಗೆ ಮಾಹಿತಿ...

ಲಿಂಗಸಗೂರು : ಉಪವಿಭಾಗದವರು ಸ್ವ-ಗ್ರಾಮಕ್ಕೆ ಮರಳಲು ಅವಕಾಶ-ಪಿ.ಡಿ.ಓ / ಕಂಟ್ರೋಲ್ ರೂಂಗೆ ಮಾಹಿತಿ ಕೊಡಿ.

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು: ಲಿಂಗಸಗೂರು, ಮಸ್ಕಿ ಹಾಗೂ ಸಿಂಧನೂರು ತಾಲೂಕಿನ ವ್ಯಾಪ್ತಿಯಿಂದ ಬೇರೆ ರಾಜ್ಯಗಳಿಗೆ ದುಡಿಯಲು/ವಿದ್ಯಾಭ್ಯಾಸಕ್ಕೆ /ಪ್ರವಾಸಕ್ಕೆ ತೆರಳಿದವರು ಲಾಕ್‌ ಡೌನ್‌ ನಿಂದಾಗಿ ಅಲ್ಲಿಯೇ ಉಳಿದುಕೊಂಡಿರುವ ವಲಸೆ ಕಾರ್ಮಿಕರು/ಪ್ರವಾಸಿಗರು/ವಿದ್ಯಾರ್ಥಿಗಳು ತಮ್ಮ ಸ್ವಗ್ರಾಮಕ್ಕೆ ಬರಬೇಕಾದವರ/ಬರಲು ಇಚ್ಚಿಸುವವರ ಕುಟುಂಬದ ಯಾರಾದರೂ ಒಬ್ಬ ಸದಸ್ಯರು, ಸದರಿ ವ್ಯಾಪ್ತಿಯ ಗ್ರಾಮದ ಪಿ.ಡಿ.ಓ. ಅಥವಾ ತಾಲೂಕಿನ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಬೇಕೆಂದು ಸಹಾಯಕ ಆಯುಕ್ತರಾದ ರಾಜಶೇಖರ  ಡಂಬಳ್‌  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಪ್ರಕಟಣೆ ಲಗತ್ತಿಸಿದೆ)

ವಲಸೆ ಕಾರ್ಮಿಕರು/ಪ್ರವಾಸಿಗರು/ವಿದ್ಯಾರ್ಥಿಗಳು ತಮ್ಮ ಸ್ವಗ್ರಾಮಕ್ಕೆ ಬರಬೇಕಾದವರ/ಬರಲು ಇಚ್ಚಿಸುವವರ ಕುಟುಂಬದ ಯಾರಾದರೂ ಒಬ್ಬ ಸದಸ್ಯರು ಸಂಬಂಧಿಸಿದ ಗ್ರಾಮದ ಪಿ.ಡಿ.ಓ. ರವರಲ್ಲಿ ನೊಂದಾಯಿಸಿ, ಹೊರ ರಾಜ್ಯದಲ್ಲಿ ಇರುವವರ ಸ್ಥಳ/ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಯ ಮಾಹಿತಿಯನ್ನು ಪಿ.ಡಿ.ಓ. ಅಥವಾ ಸಂಬಂಧಿಸಿದ ತಾಲ್ಲೂಕಿನ ಕಂಟ್ರೋಲ್‌ ರೂಂಗೆ ಮಾಹಿತಿಯನ್ನು ನೀಡಲು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಕಂಟ್ರೋಲ್‌ ರೂಂ ನಂಬರ್:‌ ಲಿಂಗಸಗೂರು:08537-257365. ಸಿಂಧನೂರು:7259417977, 7975611881, 9611999536.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news